ಔರಂಗಾಬಾದ್(ಬಿಹಾರ) ಜನದಟ್ಟಣೆಯ ಕಾಲುದಾರಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಸಿಲಿಂಡರ್ಗೆ ಸ್ಪೋಟಗೊಂಡು ಏಳು ಪೊಲೀಸ್ ಸಿಬ್ಬಂದಿ ಸೇರಿದಂತೆ 30 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ದಕ್ಷಿಣ ಬಿಹಾರದ ಔರಂಗಾಬಾದ್ ಜಿಲ್ಲೆಯ ನಡೆದಿದೆ.
ಘಟನೆಯಿಂದಾಗಿ ಕನಿಷ್ಠ ಹತ್ತು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಔರಂಗಾಬಾದ್ ಪಟ್ಟಣದ ಶಹಗಂಜ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ 2:30ಕ್ಕೆ ಕುಟುಂಬವೊಂದು ಛತ್ ಪೂಜೆಗೆ “ಪ್ರಸಾದ” ತಯಾರಿ ನಡೆಯುತ್ತಿದ್ದಾಗ ಮನೆಯೊಳಗೆ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಟೌನ್ ಪೊಲೀಸ್ ಠಾಣೆಯ ಪ್ರಭಾರಿ ಸಬ್ ಇನ್ಸ್ಪೆಕ್ಟರ್ ವಿನಯ್ ಕುಮಾರ್ ಸಿಂಗ್ ಹೇಳಿದ್ದಾರೆ.