ಸಕಲೇಶಪುರ :- ಪಟ್ಟಣದಲ್ಲಿರುವ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ನಿವಾಸಕ್ಕೆ ಅಳವಡಿಸಿದ್ದ ಇಂಗ್ಲೀಷ್ ಭಾಷೆಯ ನಾಮಫಲಕವನ್ನು ತೆರವುಗೊಳಿಸುವಂತೆ ಕಳೆದು ಒಂದು ತಿಂಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಒತ್ತಾಯಿಸಿದ್ದರು.
ಆಂಗ್ಲ ಭಾಷೆಯ ನಾಮಫಲಕ ಬದಲಾವಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಕನ್ನಡ ರಾಜೋತ್ಸವ ದಿನ ಹತ್ತಿ ಬಂದರು ಸಹ ನಾಮಫಲಕ ಬದಲಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ನಿವಾಸದ ಎದುರಿಗೆ ಕನ್ನಡ ಭಾಷೆಯಲ್ಲಿರುವ ನಾಮಫಲಕವನ್ನು ಕರವೇ ಕಾರ್ಯಕರ್ತರು ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಕರವೇ ಅಧ್ಯಕ್ಷ ರಮೇಶ್ ಪೂಜಾರಿ ಸೇರಿದಂತೆ ಇನ್ನಿತರರು ಹಾಜರಿದ್ದರು.