Sunday, November 24, 2024
Homeಸುದ್ದಿಗಳುರಾಜ್ಯಜನವರಿಗೆ ಪ್ರಿಪೇಯ್ಡ್​ ಮೀಟರ್-ಸಚಿವ ಸುನೀಲ್​ಕುಮಾರ್ ಮಾಹಿತಿ

ಜನವರಿಗೆ ಪ್ರಿಪೇಯ್ಡ್​ ಮೀಟರ್-ಸಚಿವ ಸುನೀಲ್​ಕುಮಾರ್ ಮಾಹಿತಿ

 

ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಿಗೆ ಪ್ರಿಪೇಯ್್ಡ ವಿದ್ಯುತ್ ಮೀಟರ್​ಗಳನ್ನು ಜನವರಿಯಿಂದ ಅಳವಡಿಸಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಿಪೇಯ್್ಡ ಮೀಟರ್ ಅಳವಡಿಕೆ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಮೊದಲ ಹಂತದಲ್ಲಿ ಸರ್ಕಾರಿ ಕಚೇರಿಗಳಿಗೆ ಅಳವಡಿಸಲು ತೀರ್ವನಿಸಲಾಗಿದೆ ಎಂದರು.

ಸರ್ಕಾರಿ ಕಚೇರಿಗಳಿಂದ ಬರಬೇಕಾಗಿರುವ ವಿದ್ಯುತ್ ಶುಲ್ಕದ ಬಾಕಿಯೇ 6 ಸಾವಿರ ಕೋಟಿ ರೂ.ಗಳಷ್ಟಿದೆ. ಇನ್ನೊಂದೆಡೆ ಸರ್ಕಾರ 16 ಸಾವಿರ ಕೋಟಿ ರೂ.ಗಳ ಸಬ್ಸಿಡಿ ನೀಡುತ್ತಿದೆ. ಆದ್ದರಿಂದ ಪ್ರಿಪೇಯ್್ಡ ಮೀಟರ್ ಅಳವಡಿಕೆ ಮೂಲಕ ವಿದ್ಯುತ್ ಬಿಲ್ ಕಟ್ಟುವುದನ್ನು ಮೊದಲು ಸರ್ಕಾರಿ ವ್ಯವಸ್ಥೆಯಲ್ಲಿಯೇ ಸುಸಜ್ಜಿತಗೊಳಿಸಲಾಗುವುದು ಎಂದರು. ಪ್ರಸ್ತುತ ಪ್ರತಿ 3 ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಮಾಡುವ ಬದಲು ಪ್ರತಿವರ್ಷ ಕೆಇಆರ್​ಸಿ ವಿದ್ಯುತ್ ದರ ಪರಿಷ್ಕರಣೆ ಸಂದರ್ಭದಲ್ಲಿಯೇ ಇಂಧನ ವೆಚ್ಚ ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜತೆಗೂ ಚರ್ಚೆ ಮಾಡಲಾಗಿದೆ. ಮುಂದಿನ ವರ್ಷದಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.

 

RELATED ARTICLES
- Advertisment -spot_img

Most Popular