ಸಕಲೇಶಪುರ: ಪಟ್ಟಣದ ಪುರಭವನದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆ ಕೇವಲ ಚರ್ಚೆಗೆ ಸೀಮಿತವಾಯಿತು.
ಹಳೇಬಸ್ ನಿಲ್ದಾಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಪುರಸಭಾ ಮುಂಭಾಗಕ್ಕೆ ಸ್ಥಳಾಂತರ ಮಾಡುವುದು,ಅಂಬೇಡ್ಕರ್ ಪ್ರತಿಮೆ ಜೊತೆಗೆ ಕುವೆಂಪು ಹಾಗೂ ಬಸವಣ್ಣ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನಿಸಲಾಯಿತು. ಆದರೆ ಹೆದ್ದಾರಿ ಅಗಲಿಕರಣ ಆದರೆ ಪ್ರತಿಮೆಗಳ ಕಥೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ..ಸುಭಾಷ್ ಮೈದಾನದಲ್ಲಿ ಕಸ ಸ್ಥಳಾಂತರದ ವಿಷಯಕ್ಕೆ ಉತ್ತರ ಸಿಗಲಿಲ್ಲ, ಪ್ರೇಂನಗರ ಬಡಾವಣೆಯ ತಡೆಗೋಡೆ ಹೆಚ್ಚುವರಿ ಕಾಮಗಾರಿಗೆ ಯಾವುದೆ ಟೆಂಡರ್ ಕರೆಯದಿದ್ದರು ಕಾಮಗಾರಿ ನಡೆಸಲು ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ದೊರಕಲಿಲ್ಲ. ಒಟ್ಟಾರೆ ಪುರಸಭಾ ವಿಶೇಷ ಸಭೆ ಕೇವಲ ಚರ್ಚೆಗೆ ಸೀಮಿತವಾಯಿತು. ಈ ಸಂಧರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಬಹುತೇಕ ಸದಸ್ಯರುಗಳು ಹಾಜರಿದ್ದರು.