ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಕುರಿತು ಬಿಜೆಪಿ ಸರ್ಕಾರದ ಕಣ್ತೆರೆಸಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಬೇಕು -ಕೆಪಿಸಿಸಿ ಸದಸ್ಯ ಎಡೇಹಳ್ಳಿ ಆರ್ ಮಂಜುನಾಥ್.
ಸಕಲೇಶಪುರ :- ಸಕಲೇಶಪುರ, ಆಲೂರು ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಕಾಡಾನೆ ಮಾನವ- ಸಂಘರ್ಷ ನಡೆಯುತ್ತಿದ್ದು ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯುವುದು ವಿಫಲವಾಗಿದೆ.
ಈ ನಿಟ್ಟಿನಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ಮೇಲೆ ಗಮನ ಸೆಳೆಯಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಸ್ಥಳೀಯವಾಗಿ ಇದುವರೆಗೂ ಕಾಡಾನೆ ಹಾವಳಿ ಸಂತ್ರತ್ತರ ಸಮಿತಿ, ವಿವಿಧ ಕನ್ನಡಪರ ಸಂಘಟನೆಗಳು, ಬೆಳಗಾರರ ಸಂಘ, ಸಾರ್ವಜನಿಕ ರೈತರು ಸೇರಿದಂತೆ ಹತ್ತಾರು ಪ್ರತಿಭಟನೆಗಳು ನಡೆಸಿದ್ದರು ಕೂಡ ಯಾವುದೇ ಫಲಪ್ರದವಾಗಿಲ್ಲ.
ದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳ ಮಿತಿಮೀರಿದ್ದು ಮಾನವ ಕಾಡಾನೆಗಳ ಸಂಘರ್ಷ ಏರ್ಪಟ್ಟಿದೆ ಹಾಗಾಗಿ ರಾಜ್ಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ರವರು ಸಮಸ್ಯೆ ಪರಿಹಾರ ಮಾಡಲು ಮುಂದಾಗುವಂತೆ ಕೆಪಿಸಿಸಿ ಸದಸ್ಯರಾದ ಎಡೇಹಳ್ಳಿ ಮಂಜುನಾಥ್ ಅಗ್ರಹಿಸಿದ್ದಾರೆ.