ಸಕಲೇಶಪುರ: ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆಗಳು ಮಧ್ಯಾಹ್ನದ ನಂತರ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳಿಗ್ಗೆ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದ್ದು ಮಧ್ಯಾಹ್ನದ ನಂತರ ಗ್ರಹಣವಿದ್ದಿದ್ದರಿಂದ ಮೂಡನಂಬಿಕೆಯಿಂದ ಜನ ಮನೆಯಲ್ಲೇ ಹೆಚ್ಚು ಕಾಲ ಕಳೆದಿದ್ದು ಗ್ರಾಮಾಂತರ ಪ್ರದೇಶಗಳಿಂದ ಅಂತು ಜನ ಪಟ್ಟಣದತ್ತ ಸುಳಿಯಲೆ ಇಲ್ಲ.ಇದರಿಂದ ವರ್ತಕರು ವ್ಯಾಪಾರ ಇಲ್ಲದೆ ಅಂಗಡಿಗಳಲ್ಲೆ ನಿದ್ರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇನ್ನು ಕೆಲವು ವರ್ತಕರು ಸೋಮವಾರ ಸಂಜೆ ಲಕ್ಷ್ಮೀ ಪೂಜೆ ನಡೆಸಿ ಅಂಗಡಿಗಳನ್ನು ಮುಚ್ಚಿ ಕುಟುಂಬ ಸಮೇತ ಕಾಲ ಕಳೆದಿದ್ದರಿಂದ ಒಂದು ರೀತಿಯ ಬಂದ್ ನಂತೆ ಭಾಸವಾಗುತ್ತಿತ್ತು. ರಸ್ತೆಗಳಲ್ಲಿ ಕೇವಲ ವಾಹನಗಳು ತಿರುಗಾಡುವುದು ಕಂಡು ಬಂದಿದ್ದು ಆದರೆ ಬಹುತೇಕ ಜನ ಬೀದಿಗೆ ಇಳಿಯಲಿಲ್ಲ.