ಸಕಲೇಶಪುರ:ಹಾಸನದಲ್ಲಿ ಜಿಲ್ಲಾಧಿಕಾರಿ ಅರ್ಚನಾರವರಿಗೆ ಶಾಸಕ ಎಚ್.ಕೆ ಕುಮಾರಸ್ವಾಮಿ ಮನವಿ ಸಲ್ಲಿಸಿ ಮಾತನಾಡಿ ಸಕಲೇಶಪುರ-ಆಲೂರು ತಾಲೂಕಿನಲ್ಲಿ ಕಾಡಾನೆಗಳ ಸಮಸ್ಯೆ ಮಿತಿ ಮೀರಿದ್ದು ಇದೀಗ ರೈತರು ಬೆಳೆದಿರುವ ಭತ್ತ ಕುಯ್ಲಿಗೆ ಬರುತ್ತಿದ್ದು ಆದರೆ ಕಾಡಾನೆಗಳು ಗದ್ದೆಗಳಲ್ಲಿ ದಾಂದಲೆ ನಡೆಸಿ ರೈತರು ಬೆಳೆದ ಭತ್ತವನ್ನು ನಾಶಪಡಿಸುತ್ತಿವೆ. ಆದರೆ ಇದನ್ನು ತಡೆಯಲು ಅರಣ್ಯ ಇಲಾಖೆ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಯಾವುದೆ ಸಂಧರ್ಭದಲ್ಲಿ ಪ್ರಾಣ ಹಾನಿಯಾಗುವ ಸಾಧ್ಯತೆಯಿರುವುದರಿಂದ ಕೂಡಲೆ ಕಾಡಾನೆ ಟಾಸ್ಕ್ ಪೋರ್ಸ್ ಸಮಿತಿ ಕರೆಯಬೇಕು.
ಎರಡನೇದಾಗಿ ಹಾಸನನ-ಸಕಲೇಶಪುರ-ಮಾರನಹಳ್ಳಿ ನಡುವಿನ ರಸ್ತೆ ಕಾಮಗಾರಿ ಅತ್ಯಂತ ನಿಧಾನವಾಗಿ ಹಾಗೂ ಕಳಪೆಯಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸಭೆಯನ್ನು ಕರೆಯಲು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.