Saturday, November 23, 2024
Homeಸುದ್ದಿಗಳುಸಕಲೇಶಪುರಬಾಳ್ಳುಪೇಟೆಯ: ನಿಡನೂರು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್ ಗೆ ಬಂದ ಒಂಟಿ ಸಲಗ.

ಬಾಳ್ಳುಪೇಟೆಯ: ನಿಡನೂರು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್ ಗೆ ಬಂದ ಒಂಟಿ ಸಲಗ.

ನಿಡನೂರು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್ ಗೆ ಬಂದ ಒಂಟಿ ಸಲಗ.

ಸಕಲೇಶಪುರ/ಆಲೂರು :- ಎರಡು ತಾಲೂಕಿನಲ್ಲಿ ಒಂಟಿ ಸಲಗದ ಹಾವಳಿ ಹೆಚ್ಚಾಗಿದ್ದು ಇಂದು ಬೆಳಗ್ಗೆ ಬಾಳ್ಳುಪೇಟೆ ಸಮೀಪದ ನಿಡನೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ನಿರಂತಕವಾಗಿ ಒಂಟಿ ಸಲಗ ಒಂದು ನಡೆದುಕೊಂಡು ಬಂದಿರುವ ಘಟನೆ ಜರುಗಿದೆ.

 ಬೆನ್ನಿನ ಮೇಲೆ ದೊಡ್ಡ ಗಾತ್ರದ ಗಂಟು ಇರುವ ಈ ಒಂಟಿ ಸಲಗ ವಸತಿ ಪ್ರದೇಶಕ್ಕೆ ಹೆಚ್ಚಾಗಿ ಕಾಲಿಡುತ್ತಿದ್ದು ಇದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.

 ಕಳೆದ ಎರಡು ವರ್ಷದಿಂದ ಬೆನ್ನಿನ ಮೇಲೆ ಗೆಡ್ಡೆಯೊಂದು ಬೆಳೆಯುತ್ತಿದ್ದು ದಿನದಿಂದ ದಿನಕ್ಕೆ ಅದರ ಗಾತ್ರ ದೊಡ್ಡದಾಗುತ್ತಿದ್ದರು ಅರಣ್ಯ ಇಲಾಖೆ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.

 ಅರಣ್ಯ ಇಲಾಖೆ ಸಿಬ್ಬಂದಿಗಳು ಗುರುತಿಸುವಿಕೆಗಾಗಿ ಇದಕ್ಕೆ ತಣ್ಣೀರು ಎಂದು ಹೆಸರಿಟ್ಟಿದ್ದು ಇದು ಹೆಚ್ಚಾಗಿ ವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುವ ಮನೋಭಾವದಾಗಿದೆ.

ನಿಡನೂರು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡುಗಳಿದ್ದು ಅಪಾರ ಪ್ರಮಾಣದ ಬೆಳೆಗಳ ನಾಶ ಮಾಡುತ್ತಿದೆ.

RELATED ARTICLES
- Advertisment -spot_img

Most Popular