Saturday, November 23, 2024
Homeಸುದ್ದಿಗಳುಯೂ ಟರ್ನ್ ನಾಗೇಂದ್ರ: ನೆನ್ನೆ ಪ್ರೀತಂ ಗೌಡ ವಿರುದ್ದ ಕಿಡಿ..ಇಂದು ಪ್ರೀತಂ ಗೌಡ ಗುಣಗಾನ: ಕ್ಷಮೆ...

ಯೂ ಟರ್ನ್ ನಾಗೇಂದ್ರ: ನೆನ್ನೆ ಪ್ರೀತಂ ಗೌಡ ವಿರುದ್ದ ಕಿಡಿ..ಇಂದು ಪ್ರೀತಂ ಗೌಡ ಗುಣಗಾನ: ಕ್ಷಮೆ ಕೋರಿದ ಪ್ರೀತಮ್ ಗೌಡ

ಯೂ ಟರ್ನ್ ನಾಗೇಂದ್ರ: ನೆನ್ನೆ ಪ್ರೀತಂ ಗೌಡ ವಿರುದ್ದ ಕಿಡಿ..ಇಂದು ಪ್ರೀತಂ ಗೌಡ ಗುಣಗಾನ: ಕ್ಷಮೆ ಕೋರಿದ ಪ್ರೀತಮ್ ಗೌಡ

ಹಾಸನ: ನಿನ್ನೆ ಹಾಸನಾಂಬೆ ದರ್ಶನಕ್ಕೆ ಬಂದು ವಾಪಸ್ ಹೋಗಿದ್ದ ಮೈಸೂರು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಇಂದು ಮತ್ತೊಮ್ಮೆ ತಮ್ಮ ಆಪ್ತರ ಜೊತೆ ಆಗಮಿಸಿ ದರ್ಶನ ಪಡೆದರು. ನಿನ್ನೆ ಸ್ಥಳೀಯ ಬಿಜೆಪಿ ಶಾಸಕ ಪ್ರೀತಂಗೌಡ ಅವರು ದರ್ಶನಕ್ಕೆ ವ್ಯವಸ್ಥೆ ಮಾಡಲಿಲ್ಲ ಎಂದು ಸಿಟ್ಟಿಗೆದ್ದು ವಾಪಸ್‌ ಹೋಗಿದ್ದರು. ನೈವೇದ್ಯದ ಸಮಯದಲ್ಲಿ ಅವರು ಬಂದಿದ್ದರಿಂದ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ ಇದರಿಂದ ಸಿಟ್ಟಿಗೆದ್ದು ಅಸಮಾಧಾನ ಹೊರ ಹಾಕಿ ಹೋಗಿದ್ದರು. ಮತ್ತೆ ಜಿಲ್ಲಾಡಳಿತದ ಕಡೆಯಿಂದ ದರ್ಶನ ಪಡೆಯಲು ಬರುತ್ತೇವೆ ಎಂದು ಹೇಳಿ ಹೋಗಿದ್ದರು.

ಅದರಂತೆ ಇಂದು ಜಿಲ್ಲಾಡಳಿತದ ಕಡೆಯಿಂದ ಶಿಷ್ಟಾಚಾರದ ಪ್ರಕಾರವೇ ಬಂದು ದೇವಿಯ ದರ್ಶನ ಪಡೆದರು.

ನಾಗೇಂದ್ರ ಅವರು ಬರುವ ವಿಚಾರ ತಿಳಿದು ಕಾದು ನಿಂತು ನಾಗೇಂದ್ರ ಅವರನ್ನು ಪ್ರೀತಂಗೌಡ ಅವರೇ ಸ್ವಾಗತ ಮಾಡಿದರು. ನಾಗೇಂದ್ರ ಅವರನ್ನು ತಬ್ಬಿಕೊಂಡು ಸ್ವಾಗತ ಮಾಡಿದರು.

 

ದರ್ಶನ ಪಡೆದ ನಂತರ ಮಾತನಾಡಿದ ನಾಗೇಂದ್ರ, ಕಾರ್ತಿಕ ಮಾಸದ ಅಮಾವಾಸ್ಯೆ ಮುನ್ನಾ ದಿನ ದೇವಿ ದರ್ಶನ ಚೆನ್ನಾಗಿ ಆಗಿದೆ.ಇದು ನಮ್ಮ ಸೌಭಾಗ್ಯ, ನನ್ನ ಆತ್ಮೀಯ ಸ್ನೇಹಿತ ಪ್ರೀತಂಗೌಡ ನನಗೆ ದರ್ಶನ ಮಾಡಿಸಿದ್ದಾರೆ.ತಾಯಿ ಚಾಮುಂಡೇಶ್ವರಿಯಂತೆ, ಹಾಸನಾಂಬೆಯನ್ನೂ ನೋಡಲು ಹೆಚ್ಚಿನ ಭಕ್ತರು ಬರ್ತಾರೆ.

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಇರುವುದರಿಂದ ಹೆಚ್ಚಿನ ಭಕ್ತರು ಬರುತ್ತಾರೆ. ನೆನ್ನೆ ದರ್ಶನ ಸಮಯ ಗೊತ್ತಿಲ್ಲದ ಕಾರಣ ತಡವಾಗಿ ಬಂದಿದ್ದೆ. ಪ್ರೀತಂಗೌಡ ಅವರಿಗೂ ನಾನು ಫೋನ್ ಮಾಡಿರಲಿಲ್ಲ ಹಾಗಾಗಿ ಸಮಸ್ಯೆ ಆಯ್ತು. ನನ್ನೊಂದಿಗೆ ಬಂದಿದ್ದ 50 ಜನ ಹೊರಗಿದ್ದರು.ಅವರನ್ನೂ ಬಿಡಿ ಎಂದು ಕೇಳಿದೆ. ಬಿಡದ ಕಾರಣ, ನಾನೂ ಕೂಡ ವಾಪಸ್ ಹೋಗಿದ್ದೆ ಎನ್ನುವ ಮೂಲಕ ನಿನ್ನೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈಗ ಬಂದು ದರ್ಶನ ಮಾಡಿದ್ದೇನೆ.ಪ್ರೀತಂಗೌಡ ನನಗೆ ಸಹೋದರನ ಸಮಾನ, ನನಗೆ ತಮ್ಮ ಇದ್ದ ಹಾಗೆ. ನಾನು ಅವರಿಗೆ ವಿಭಾಗ ಪ್ರಭಾರಿ ಆಗಿದ್ದೆ. ನಾನು ಬಂದಾಗಲೆಲ್ಲಾ ನನಗೆ ಊಟ ಕೊಡಿಸುತ್ತಿದ್ದ ಗೆಳೆಯ, ಹಾಗಾಗಿ ಆತ್ಮೀಯತೆ ಇದೆ. ಅಣ್ಣತಮ್ಬರಂತೆ ಹೆಚ್ಚು ಸಲುಗೆ ಇದೆ. ಹಾಗಾಗಿ ನಾನು ಅವನಿಗೆ ಏನು ಬೇಕಿದ್ರೂ ಮಾತಾಡಬಹುದು. ಆತ್ಮೀಯತೆ ಇರೋದ್ರಿಂದ ಅವನಿಗೆ ನಾನು ಹೇಳಬಹುದು, ಏನಾದ್ರು ಕೇಳಬಹುದು ಎಂದರು.

 

ನೆನ್ನೆ ದರ್ಶನಕ್ಕೆ ಬಂದಾಗ ಹೆಚ್ಚುವರಿ ಎಸ್ಪಿ ತಡೆದ ಬಗ್ಗೆ ಗೃಹ ಕಚೇರಿಗೆ ಮಾಹಿತಿ ನೀಡಿದ್ದ ವಿಚಾರವಾಗಿ, ನೆನ್ನೆ ಅಧಿಕಾರಿಗಳು ಒತ್ತಡದಲ್ಲಿದ್ದರು, ಅವರಿಗೆ ಶಾಸಕರು ಯಾರು ಎಂದು ಗೊತ್ತಾಗಿಲ್ಲ. ಸಮನ್ವಯದ ಕೊರತೆಯಿಂದ ಹೀಗಾಗಿದೆ ಇದನ್ನು ನಾನು ಮುಂದುವರೆಸುವುದಿಲ್ಲ ಎಂದರು.

*ಕ್ಷಮೆ ಕೋರಿದ ಶಾಸಕ ಪ್ರೀತಂ*

ನಿನ್ನೆಯ ಘಟನೆ ಬಗ್ಗೆ ಪ್ರೀತಂಗೌಡ ಅವರು ಬಹಿರಂಗವಾಗಿ ನಾಗೇಂದ್ರ ಅವರ ಕ್ಷಮೆ ಕೇಳಿದರು. ಕೆಲಸದ ಒತ್ತಡದಿಂದ ಅಧಿಕಾರಿಗಳು ಒತ್ತಡ ತಡೆಯಲಾಗಿಲ್ಲ. ಯಾವುದೇ ಪಕ್ಷದ ಚುನಾಯಿತ ಪ್ರತಿನಿದಿ ಬಂದರೂ ಜಿಲ್ಲಾಡಳಿತ ಎಲ್ಲಾರೀತಿಯ ಸಹಕಾರ ನೀಡಿದೆ ಎಂದರು.

ನೆನ್ನೆ ಸಮನ್ವಯದ ಕೊರತೆಯಿಂದ ಸಮಸ್ಯೆ ಆಗಿದೆ. ನನ್ನ ಹಿರಿಯರು, ಸಹೋದರ ಸಮಾನರಾದ ಅವರಿಗೆ ನಾನು ಎಲ್ಲರ ಸಮ್ಮುಖದಲ್ಲಿ ಕ್ಷಮೆ ಕೇಳುತ್ತೇನೆ. ನನಗೆ ಯಾವುದೇ ಈಗೋ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಾರೂ ಕೂಡ ತಪ್ಪು ಮಾಡಬೇಕೆಂದು ಮಾಡಲ್ಲ, ಆಕಸ್ಮಿಕವಾಗಿ ಆಗಿದೆ ಇದನ್ನ ಇಲ್ಲಿಗೆ ಮುಗಿಸೋಣ ಎಂದು ಮನವಿ ಮಾಡಿದರು.

RELATED ARTICLES
- Advertisment -spot_img

Most Popular