ಹಿರಿದನಹಳ್ಳಿ ಸುತ್ತಮುತ್ತ ಕಾಡಾನೆ ದಾಂದಲೆ. ಅಪಾರ ಪ್ರಮಾಣದ ಭತ್ತದ ಬೆಳೆ ನಾಶ.
ಸಕಲೇಶಪುರ :- ಕಳೆದ ಎರಡು ವಾರಗಳಿಂದ ತಾಲೂಕಿನ ಹೆತ್ತೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಬೀಡು ಬಿಟ್ಟಿದ್ದು ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡುತ್ತಿವೆ.
ಕಳೆದ ರಾತ್ರಿ ಹಿರಿದನಹಳ್ಳಿಯ ಲೋಕೇಶ್ ಎಂಬುವವರ ಭತ್ತದ ಗದ್ದೆಗೆ ಲಗ್ಗೆ ಹಿಟ್ಟಿರುವ ಕಾಡಾನೆಗಳ ಹಿಂಡು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ತಿಂದು, ಅಡ್ಡಾದಿಡ್ಡಿ ತಿರುಗಾಡಿದ ಪರಿಣಾಮ ಹುಲಿಸಾಗಿ ಬೆಳೆದಿದ್ದ ಮಳೆ ಮಣ್ಣುಪಾಲುಗಿದೆ.
ರೈತ ಲೋಕೇಶ್ ಆಕ್ರೋಶ : ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆ ನಿಮಿಷದಲ್ಲಿ ಕಾಡಾನೆಗಳ ಪಾಲಾಗುತ್ತಿದೆ. ಇನ್ನು ಸರ್ಕಾರ ನೀಡುವ ಪರಿಹಾರ ನಮ್ಮಗಳ ಶ್ರಮಕ್ಕೆ ಸೂಕ್ತವಾದ ಪರಿಹಾರ ಒದಗಿಸುವುದಿಲ್ಲ, ಪರಿಹಾರದ ಹಣಕ್ಕೆ ಜಾತಕ ಪಕ್ಷಿತರ ಕಾದು ಕುಳಿತುಕೊಳ್ಳಬೇಕಾಗಿದೆ. ಕಳೆದ ವರ್ಷದ ಪರಿಹಾರವೇ ಇನ್ನೂ ಸರಿಯಾಗಿ ರೈತರಿಗೆ ತಲುಪಿಲ್ಲ ಇನ್ನು ಈಗಿನ ಹಾನಿಗೆ ಪರಿಹಾರ ಯಾವಾಗ ಬರುತ್ತದೆ ಎಂದು ಕಾದು ನೋಡಬೇಕು.ಸರ್ಕಾರ ಕೂಡಲೇ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಬೇಕೆಂದು ಆಗ್ರಹಿಸಿದ್ದಾರೆ.