ಸಕಲೇಶಪುರ : ರಾಜ್ಯ ಹೆದ್ದಾರಿ ಬಿಳಿತಾಳು, ಲಕ್ಷ್ಮೀಪುರದಿಂದ ಹೆತ್ತೂರು ಗ್ರಾಮದವರೆಗೂ ಸುಮಾರು 15 ಕೋಟಿ ರೂಪಾಯಿ ವೆಚ್ಚದ 8 ಕಿ. ಮೀ ರಸ್ತೆ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಕೊನೆಗೂ ಮುಕ್ತಿಹೊಂದಿದೆ.
ರಸ್ತೆ ನಿರ್ಮಾಣಕ್ಕೆ ರಾಜ್ಯ ಹೆದ್ದಾರಿ ಬದಿಯಲ್ಲಿನ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರು ನಡುವಿನ ತಿಕ್ಕಾಟದಿಂದ ಮರ ತೆರವುಗೊಳಿಸದೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.
ಅಂತಿಮವಾಗಿ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆ 43 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಲೋಕೋಪಯೋಗಿ ಇಲಾಖೆ ತಿಳಿಸಿತ್ತು. ಆದರೆ ಲೋಕೋಪಯೋಗಿ ಇಲಾಖೆ ಪಾವತಿಸಲು ನಿರಾಕರಿಸಿತ್ತು ಇದರಿಂದ ಒಂದು ವರ್ಷದಿಂದ ರಸ್ತೆಗೆ ಗ್ರಹಣ ಹಿಡಿದಂತಾಗಿತ್ತು.
ಅಂತಿಮವಾಗಿ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರ ಮಧ್ಯಪ್ರವೇಶದಿಂದ ಅರಣ್ಯ ಇಲಾಖೆಗೆ ಲೋಕೋಪಯೋಗಿ ಇಲಾಖೆ 43 ಲಕ್ಷ ರೂಪಾಯಿ ಪಾವತಿಸಿದ್ದರಿಂದ ಕಾಮಗಾರಿ ಆರಂಭವಾಗಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ.
ಶಾಸಕರ ಈ ಮಹತ್ಕಾರ್ಯಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.