ಸಕಲೇಶಪುರ :- ಕಸಬಾ ಹೋಬಳಿ ವ್ಯಾಪ್ತಿಯ ಆನೆಮಹಲ್ ನಲ್ಲಿರು ನ್ಯಾಯಬೆಲೆ ಅಂಗಡಿಯಲ್ಲಿ ಪಠೀತರ ಚೀಟಿದಾರರ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಪಕ್ಕದ ಧೋನಿಗಲ್ ಗ್ರಾಮದಲ್ಲಿ ನ್ಯಾಯಬೆಲೆ ಉಪ ಕೇಂದ್ರವನ್ನು ತೆರೆಯುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗೆ ಆನೆಮಹಲ್ ನಲ್ಲಿರುವ ಪಡಿತರ ಚೀಟಿದಾರರ ವಿತರಣಾ ಕೇಂದ್ರದಲ್ಲಿ ಪ್ಲಾಸ್ಟಿಕ್ ಅಕ್ಕಿ ಕಂಡು ಬಂದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಗ್ರಾಮಸ್ಥರು ಆನೆಮಹಲ್ ನಲ್ಲಿರುವ ಹಾಲಿ ನ್ಯಾಯ ಬೆಲೆ ಅಂಗಡಿಯಲ್ಲಿ 600ಕ್ಕೂ ಹೆಚ್ಚು ಪಡಿತರ ಕಾರ್ಡ್ ಗಳಿದ್ದು ಪಡಿತರಕೊಳ್ಳಲು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದು ಒದಗಿದೆ ಜೊತೆಗೆ ಸರ್ವರ್ ಸಮಸ್ಯೆ ಇರುವುದರಿಂದ ಕೂಲಿ ಕಾರ್ಮಿಕರು ಮಹಿಳೆಯರು ಪಡಿತರ ಕೊಳ್ಳಲು ಅನಾನುಕೂಲವಾಗುತ್ತದೆ ಎಂದು ದೂರಿತ್ತರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ತಹಸೀಲ್ದಾರ್ ಜೈಕುಮಾರ್ ಸ್ಥಳದಲ್ಲೇ ಇದ್ದ ಆಹಾರ ಇಲಾಖೆಯ ಅಧಿಕಾರಿಗಳಿಗೆ ಪಡಿತರ ಚೀಟಿದಾರರು ವಿಂಗಡಣೆ ಮಾಡಿ ಪಕ್ಕದ ಗ್ರಾಮದ ದೋಣಿಗಲ್ ನಲ್ಲಿ ಉಪ ಕೇಂದ್ರವನ್ನು ಶೀಘ್ರದಲ್ಲೇ ತೆರೆಯುವಂತೆ ಸೂಚನೆ ನೀಡಿದರು.