Saturday, November 23, 2024
Homeಸುದ್ದಿಗಳುಮದರಸಾ ಶಿಕ್ಷಣ ನಿಷೇಧಿಸುವಂತೆ ಶ್ರೀ ರಾಮ ಸೇನೆ ಆಗ್ರಹ

ಮದರಸಾ ಶಿಕ್ಷಣ ನಿಷೇಧಿಸುವಂತೆ ಶ್ರೀ ರಾಮ ಸೇನೆ ಆಗ್ರಹ

 

ರಾಜ್ಯದಲ್ಲಿ ದ್ವೇಷ ಮತಾಂದತೆಯನ್ನು ಬಿತ್ತುವ ಮದರಸಾ ಶಿಕ್ಷಣವನ್ನು ನಿಷೇಧ ಮಾಡುವಂತೆ ಶ್ರಿ ರಾಮ ಸೇನೆ ಜಿಲ್ಲಾ ಘಟಕ ಶುಕ್ರವಾರ ಉಪವಿಭಾಗದೀಕಾರಿ ಕಛೇರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಹಲವು ಮದರಸಾಗಳಲ್ಲಿ ಹೆಣ್ಣು ಮಕ್ಕಳಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ಜರುಗುತ್ತಿರುವುದು ಗಮನಕ್ಕೆ ಬರುತ್ತಿದೆ. ಅದಲ್ಲದೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಕಮಿಷನ್ ಅಧ್ಯಕ್ಷ ಪ್ರಿಯಾಂಕ್ ಕಸೊಂಗೊ ಇವರು ಮದರಸ ಮೂಲಕ ಮಕ್ಕಳ ಹಕ್ಕುಗಳ ಉಲ್ಲಂಘಟನೆಯಾಗುತ್ತದೆ ಮತ್ತು ಮದರಸಾಗಳು ಸಂವಿದಾನದ ಶಿಕ್ಷಣ ಹಕ್ಕಿನ ಅಧಿನಿಯಮ ಕಲಂ 21 ರ ಘೋರ ಉಲ್ಲಂಘನೆ ಮಾಡುತ್ತವೆ ಎಂದು ಹೇಳಿದ್ದಾರೆ ಆದ್ದರಿಂದ ಮದರಸಾಗಳನ್ನು ನಿಷೆದಿಸ ಬೇಕು ಎಂದು ಶ್ರೀ ರಾಮ ಸೇನೆ ಜಿಲ್ಲಾ ಅದ್ಯಕ್ಷ ಜಾನೆಕೆರೆ ಹೇಮಂತ್ ಆಗ್ರಹಿಸಿದರು

ರಾಜ್ಯದ ಸುರಕ್ಷತೆ ದೃಷ್ಟಿಯಿಂದ ಇದು ಅತ್ಯಂತ ಮಹತ್ವದಾಗಿದೆ ಮತ್ತು ರಾಜ್ಯದ ಧಾರ್ಮಿಕ ಸೌಹಾರ್ದತೆ ಕಾಪಾಡಲು ಸರಕರಾವು ಈ ಎಲ್ಲ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕರ್ನಾಟಕ ರಾಜ್ಯದಲ್ಲಿ ಇರುವ ಮದರಸಾಗಳ ತನಿಖೆಯನ್ನು ಮಾಡಬೇಕು, ಅಲ್ಲಿ ಯಾವ ವಿಷಯ ಬೋಧಿಸಲಾಗುತ್ತದೆ ಅದರ ಪರಿಶೀಲನೆ ಮಾಡಬೇಕು. ಮತಾಂದತೆಯ ಪ್ರಚಾರವಾಗುವದನ್ನು ತಡೆಯಲು ಮದರಸಾದ ಶಿಕ್ಷಣದ ಮಾನ್ಯತೆಯನ್ನು ರದ್ದು ಮಾಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಶ್ರಿರಾಮ ಸೇನೆ ಜಿಲ್ಲಾ ಅಧ್ಯಕ್ಷ ಜಾನೆಕರೆ ಹೇಮಂತ್ ಉಪಾಧ್ಯಕ್ಷ ಮನು ಜಗತ್ ತಾಲ್ಲೂಕು ಅದಕ್ಷ ಭರತ್ ಕುಮಾರ್ ದೇಕಲ ಲೋಕೇಶ್ ತಾ ಕಾರ್ಯದರ್ಶಿ ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular