ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪಟ್ಟಣದ ತೇಜಸ್ವಿ ಚಿತ್ರಮಂದಿರದಿಂದ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಕಂಪನಿಯ ಅಣುಕು ಶವಯಾತ್ರೆಯನ್ನು ಆ್ಯಂಬುಲೆನ್ಸ್ ನೊಂದಿಗೆ ಹೇಮಾವತಿ ಸೇತುವೆ ವರೆಗೆ ಮೆರವಣಿಗೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಪ್ರತಿಭಟನಕಾರರು ಆಕ್ರೋಷ ವ್ಯಕ್ತಪಡಿಸಿ ಸಕಲೇಶಪುರ ಪಟ್ಟಣದಲ್ಲಿ ಹಾದು ಹೊರಗಿರುವ ರಾಷ್ಟ್ರೀಯ ಹೆದ್ದಾರಿ 75 ರ ದುರಸ್ತಿ ಕಾರ್ಯವನ್ನು ಹೆದ್ದಾರಿ ಪ್ರಾಧಿಕಾರದವರು ನಡೆಸದೆ ಪಟ್ಟಣದ ಒಳಭಾಗದಲ್ಲಿ ಹೋಗಿರುವ ರಸ್ತೆ ಸಂಪೂರ್ಣ ಗುಂಡಿಯಾಗಿದೆ ಹಾಗೂ ಹೇಮಾವತಿ ನದಿ ಸೇತುವೆಯ ಮೇಲ್ಭಾಗದಲ್ಲಿ ಡಾಂಬರ್ ಮಳೆಯಿಂದಾಗಿ ಕಿತ್ತು ಹೋಗಿದ್ದು ಅದನ್ನು ಕೂಡಲೆ ದುರಸ್ತಿ ಮಾಡಿಸಬೇಕು. ಹಳೆ ಹಾಗೂ ಹೊಸ ಸೇತುವೆಗೆ ವಿದ್ಯುತ್ ದೀಪಗಳು ಇಲ್ಲದೆ ಜನರು ಸಂಚರಿಸಲು ತೊಂದರೆ ಯಾಗುತಿದೆ. ಪಟ್ಟಣ ವ್ಯಾಪ್ತಿ ರಸ್ತೆಯ ಬದಿ ಕಾಡಿನಂತಾಗಿದ್ದು ಕೂಡಲೆ ಇದನ್ನು ಸ್ವಚ್ಛಗೊಳಿಸಬೇಕು ಎಂದು ಆಕ್ರೋಷ ವ್ಯಕ್ತಪಡಿಸಿದರು.