ಸಕಲೇಶಪುರ: ತುಳುನಾಡ ದೈವರಾಧನೆ ಹಿಂದೂಗಳದ್ದಲ್ಲ ಎಂಬ ಅಜ್ಞಾನದ ವಿಚಾರಗಳನ್ನು ಮಾಧ್ಯಮಗಳಲ್ಲಿ ಪ್ರಸ್ತಾಪ ಮಾಡಿದ ಚಿತ್ರ ನಟ ಚೇತನ್ ಕ್ಷಮೆ ಯಾಚನೆ ಮಾಡಬೇಕು ಎಂದು ಸಕಲೇಶಪುರ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಪ್ರತಾಪ್ ಪೂಜಾರಿ ಆಗ್ರಹಿಸಿದ್ದಾರೆ.
ಚೇತನ್ ಗೆ ಅಷ್ಟೊಂದು ಪಬ್ಲಿಸಿಟಿ ಹುಚ್ಚಿದ್ರೆ ಹಿಂದೂ ಧರ್ಮದ ಬದಲಾಗಿ ಅನ್ಯ ಕೋಮಿನ ಬಗ್ಗೆ ಮಾತನಾಡಲಿ. ಆಗ ಅವನ ಜೀವನ ಸ್ಥಿತಿ ಯಾವ ಮಟ್ಟಕ್ಕೆ ಬರುತ್ತೆ ಎಂದು ಯಾರೂ ಹೇಳಬೇಕಿಲ್ಲ.ಹಿಂದೂಗಳು ಶಾಂತಿ ಪ್ರಿಯರು. ಏನೂ ಆಗೋಲ್ಲ ಎಂದು ಬಾಯಿಗೆ ಬಂದಂತೆ ವರ್ತಿಸಿದರೆ ಅದಕ್ಕೆ ಸೂಕ್ತ ಉತ್ತರ ಕೊಡಲು ನಾವು ಸದಾ ಸಿದ್ದರಾಗಿದ್ದೇವೆ.
ಹಿಂದುತ್ವ ಹಿಂದೂ ಧರ್ಮದ ಬಗ್ಗೆ ನಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ. ಹಿಂದೂ ವಿರೋಧಿಗಳಿಂದ ಪಾಠ ಹೇಳಿಸಿಕೋಳ್ಳುವ ಅವಶ್ಯಕತೆ ನಮಗೆ ಇಲ್ಲ… ನಮ್ಮ ಸನತಾನ ಧರ್ಮದ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ
ಈತ ಮತಿಭ್ರಮಣೆ ಹೊಂದಿದಂತೆ ಹಲವಾರು ಸಮಯಗಳಿಂದ ವರ್ತಿಸುತ್ತಿದ್ದಾನೆ. ಈತನ ರೋಗಕ್ಕೆ ಔಷದಿ ಅಗತ್ಯ. ಔಷದಿ ಯಾವ ರೀತಿಯದ್ದು ಎಂದು ಕಾಲವೇ ನಿರ್ಧಾರ ಮಾಡಲಿದೆ.ಪೊಲೀಸ್ ಇಲಾಖೆ ಆತನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.