Sunday, January 11, 2026
Homeಸುದ್ದಿಗಳುಸಕಲೇಶಪುರಬಡ ಮುಸ್ಲಿಂ ಕುಟುಂಬಕ್ಕೆ ಆಸರೆಯಾದ ಶಾಸಕ ಸಿಮೆಂಟ್ ಮಂಜು: ವೇತನದ ಚೆಕ್ ವಿತರಣೆ

ಬಡ ಮುಸ್ಲಿಂ ಕುಟುಂಬಕ್ಕೆ ಆಸರೆಯಾದ ಶಾಸಕ ಸಿಮೆಂಟ್ ಮಂಜು: ವೇತನದ ಚೆಕ್ ವಿತರಣೆ

ಬಡ ಮುಸ್ಲಿಂ ಕುಟುಂಬಕ್ಕೆ ಆಸರೆಯಾದ ಶಾಸಕ ಸಿಮೆಂಟ್ ಮಂಜು: ವೇತನದ ಚೆಕ್ ವಿತರಣೆ

ಆಲೂರು: ತಂದೆಯ ನಿಧನದಿಂದ ಬಡ ಕುಟುಂಬದ ಹೆಣ್ಣು ಮಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಕೊಡಿಸಿ ಮೊದಲ ತಿಂಗಳ ವೇತನದ ಚೆಕ್ಕನ್ನು ಶಾಸಕ ಸಿಮೆಂಟ್ ಮಂಜು ವಿತರಿಸಿದರು.

ಪಟ್ಟಣದ  ತಾಲೂಕು ಆಸ್ಪತ್ರೆಯಲ್ಲಿ ಒಂದು ತಿಂಗಳ ತ ಹಿಂದೆ ಹೃದಯಾಘಾತದಿಂದ ಮೃತರಾಗಿದ್ದ  ನವೀದ್ ಪಾಷಾ ಅವರ ಮಗಳು ಜವೇರಿಯಾ ಅವರಿಗೆ ಶಾಸಕರು ಚೆಕ್ ವಿತರಿಸಿದರು.

ಬಡ ಕುಟುಂಬವಾದ ನವೀದ್ ಪಾಷಾ ಮನೆಯ ಜವಾಬ್ದಾರಿ ಹೊತ್ತಿದ್ದರು. ದಿಡೀರ್ ಸಾವಿನಿಂದ ಕಂಗಾಲಾಗಿದ್ದ ಕುಟುಂಬಕ್ಕೆ ಶಾಸಕರ ಸೂಚನೆ ಮೇರೆಗೆ ನವೀದ್ ಪಾಷಾ ಪುತ್ರಿಗೆ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ನೀಡಲಾಗಿತ್ತು. ಕೆಲಸ ನೀಡಿ ಒಂದು ತಿಂಗಳ ನಂತರ ಮೊದಲ ತಿಂಗಳ ವೇತನದ ಚೆಕ್ ನ್ನು ಶಾಸಕರಿಂದಲೇ ಪಡೆಯಬೇಕೆಂದು ಯುವತಿ ಇಚ್ಚೆ ವ್ಯಕ್ತಪಡಿಸಿದರಿಂದ ಶಾಸಕರು ಚೆಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಮುಖಂಡರು ಇದ್ದರು.

RELATED ARTICLES
- Advertisment -spot_img

Most Popular