ನಮ್ಮ ಸಂವಿಧಾನ “ಪ್ರಜಾಪ್ರಭುತ್ವ ಕಾಯುವ ಏಕೈಕ ಗ್ರಂಥ” – ಶಾಸಕ ಸಿಮೆಂಟ್ ಮಂಜು
ಸಕಲೇಶಪುರ : ಸಂವಿಧಾನ ದಿನದ ಅಂಗವಾಗಿ ಶಾಸಕ ಸಿಮೆಂಟ್ ಮಂಜು ಅವರು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ನೆರವೇರಿಸಿದರು.
ನಂತರ ಮಾತನಾಡಿದ ಅವರು,ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ್ ಒದಗಿಸಿದ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದ್ದು, ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಭಾರತ ಸಂವಿಧಾನ” ದಿನಾಚರಣೆಯ ವಿಶೇಷತೆ ಆಗಿದೆ.
ಸಂವಿಧಾನ’ ಪ್ರಜಾಪ್ರಭುತ್ವ ಕಾಯುವ ಏಕೈಕ ಗ್ರಂಥ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು, ‘ಸಂವಿಧಾನ ಬರೀ ನ್ಯಾಯಾಲಯಗಳಿಗೆ ಸೀಮಿತವಾಗಿರಬಾರದು. ಸಂವಿಧಾನವು ನಮ್ಮ ಜೀವನ, ನಮ್ಮ ಸಂಸ್ಕಾರಗಳಿಗೆ, ನಮ್ಮ ಭಾವನೆಗಳಿಗೆ ನವಚೈತನ್ಯವನ್ನು ಕೊಡಬಲ್ಲದು. ಅದಕ್ಕಾಗಿ ನಾವು ಅದನ್ನು ಜನಸಾಮಾನ್ಯರ ಹೃದಯಸ್ಪರ್ಶಿಸುವವರೆಗೂ ತೆಗೆದುಕೊಂಡು ಹೋಗಬೇಕು’ ಎನ್ನುವ ಹಿನ್ನೆಲೆಯಲ್ಲಿ, ನವೆಂಬರ್ 26ರ ದಿನವನ್ನು ‘ಸಂವಿಧಾನ ದಿವಸ’ ಎಂದು ಆಚರಿಸುವ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿ ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಸಂಕಲ್ಪ ವ್ಯಕ್ತಪಡಿಸಿದರು.



