ಬಾಳ್ಳುಪೇಟೆ ಉಪಕೇಂದ್ರದಿಂದ ಮೂರು ದಿನ ವಿದ್ಯುತ್ ವ್ಯತ್ಯಯ
ಸಕಲೇಶಪುರ, ಅ.16: ಸಕಲೇಶಪುರ ಉಪವಿಭಾಗದ ಬಾಳ್ಳುಪೇಟೆ ಶಾಖಾ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಮುಂದಿನ ಮೂರು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬಾಳ್ಳುಪೇಟೆ ಸರ್ಕಲ್ನಿಂದ ಜಮ್ಮನಹಳ್ಳಿ ಗ್ರಾಮದವರೆಗೆ 3 ಕಿ.ಮೀ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿದ್ದು, ಈ ಕಾಮಗಾರಿ ಹಿನ್ನೆಲೆಯಲ್ಲಿ ಕೊಡ್ಲಿಪೇಟೆ–ಬಾಳ್ಳುಪೇಟೆ ಸಂಪರ್ಕ ರಸ್ತೆಯ ಬದಿಯಲ್ಲಿರುವ 11 ಕೆವಿ ಮತ್ತು ಎಲ್ಟಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಅಗತ್ಯ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಬಾಳ್ಳುಪೇಟೆ 66/11 ಕೆವಿ ಉಪಕೇಂದ್ರದಿಂದ ಹೊರಹೊಮ್ಮುವ ಎಫ್-9 ರೊಸೆಟ್ಟಾ, ಎಫ್-2 ಬಾಳ್ಳುಪೇಟೆ ಮತ್ತು ಎಫ್-8 ಅಬ್ಬನ 11 ಕೆವಿ ಫೀಡರ್ಗಳ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯಗೊಳ್ಳಲಿದೆ.
ಅ.17, ಅ.18 ಮತ್ತು ಅ.24ರಂದು ಈ ಮೂರು ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೂ ಕೆಲಸ ನಡೆಯಲಿದ್ದು, ಸದರಿ ದಿನಗಳಲ್ಲಿ ಸಂಬಂಧಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಸಹಕಾರ ನೀಡುವಂತೆ ವಿನಂತಿ ಮಾಡಲಾಗಿದೆ.