Tuesday, January 13, 2026
Homeಸುದ್ದಿಗಳುಸಕಲೇಶಪುರಕಾರು ಚಾಲಕ ಮಾಲೀಕರ ಸಂಘದ ಮಾಜಿ ಹೆಚ್ ಬಿ ಮಲ್ಲೇಶ್ ಗೌಡ ನಿಧನ

ಕಾರು ಚಾಲಕ ಮಾಲೀಕರ ಸಂಘದ ಮಾಜಿ ಹೆಚ್ ಬಿ ಮಲ್ಲೇಶ್ ಗೌಡ ನಿಧನ

ಸಕಲೇಶಪುರ : ಕಾರು ಚಾಲಕ ಮಾಲೀಕರ ಸಂಘದ ಮಾಜಿ ಅಧ್ಯಕ್ಷರು, ಅಹಿಂದ ಮುಖಂಡರು, ಜನಮಿತ್ರ ಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತರಾದ ಹೆಚ್ ಬಿ ಮದನ್ ಗೌಡರ ಸಹೋದರ ಹೆಚ್ ಬಿ ಮಲ್ಲೇಶ್ ಗೌಡ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಹೆತ್ತೂರು ಮೂಲದ ಹೆಚ್ ಬಿ ಮಲ್ಲೇಶ್ ಗೌಡ (70) ಅವರು ಸಣ್ಣ ವಯಸ್ಸಿನಲ್ಲೇ ಸಕಲೇಶಪುರ ಪಟ್ಟಣಕ್ಕೆ ಬಂದು ಸ್ವಾವಲಂಬಿಯಾಗಿ ಕಾರು ಚಾಲಕರಾಗಿ ಜೀವನ ಆರಂಭಿಸಿ, ನಂತರ ರಾಜಕೀಯ ಕ್ಷೇತ್ರದಲ್ಲಿ ಅಹಿಂದ ನಾಯಕರಾಗಿ ಜನಮನ್ನಣೆ ಪಡೆದಿದ್ದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುರಳಿ ಮೋಹನ್ ಸೇರಿದಂತೆ ಹಲವಾರು ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.

ಮೃತರು ಪತ್ನಿ ಹಾಗೂ ಪುತ್ರರನ್ನು ಅಗಲಿದ್ದಾರೆ. ಕುಟುಂಬದ ಸದಸ್ಯರು, ಬಂಧುಮಿತ್ರರು ಹಾಗೂ ಸ್ಥಳೀಯರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ದುಃಖ ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದರು.

ಮೃತರ ಅಂತಿಮ ಸಂಸ್ಕಾರವನ್ನು ನಾಳೆ (ಬುಧವಾರ) ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular