ಬೆಟ್ಟಹಳ್ಳಿ ಗ್ರಾಮಕ್ಕೆ ನೂತನ ಬಸ್ ಶಾಸಕ ಸಿಮೆಂಟ್ ಮಂಜು ಚಾಲನೆ
ಆಲೂರು: ಸಿಂಧುವಳ್ಳಿ- ಬೆಟ್ಟಹಳ್ಳಿ ಗ್ರಾಮಸ್ಥರ ಬಹುದಿನ ಬೇಡಿಕೆಯಾದ ಸಾರಿಗೆ ಬಸ್ ಸೌಕರ್ಯಕ್ಕೆ ಶಾಸಕ ಸಿಮೆಂಟ್ ಮಂಜು ಸೋಮವಾರ ಚಾಲನೆ ನೀಡಿದರು.
ನೂತನವಾಗಿ ನಿರ್ಮಾಣಗೊಂಡ ಬಸ್ಸು ನಿಲ್ದಾಣ ಮತ್ತು ಗ್ರಾಮಕ್ಕೆ ನೂತನವಾಗಿ ಆಗಮಿಸಿದ ನೂತನ ಮಾರ್ಗದ ಬಸ್ಸಿಗೆ ಚಾಲನೆ ನೀಡಿ ಮಾತನಾಡಿ, ಈ ಮಾರ್ಗದಲ್ಲಿ ಬಸ್ಸಿನ ಸೌಕರ್ಯವಿಲ್ಲದೆ ಆಸತ್ರೆ, ಕಚೇರಿ ಇನ್ನಿತರೆ ಕೆಲಸಗಳಿಗೆ ಹೋಗಿ ಬರಲು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರಿಗೆ ತೀವ್ರ ತೊಂದರೆ ಯಾಗಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು.
ನೂತನವಾಗಿ ಈ ಮಾರ್ಗದಲ್ಲಿ ಓಡಾಡುವ ಬಸ್ಸು ತಿಪಾಪುರ, ದೈತಾಪುರ, ಬೆಕ್ಕಡಿ, ದಾಟೂರು,ನಲ್ಲೂರು, ಮಾರನಾಯಕನಹಳ್ಳಿ, ಅರೆಹಳ್ಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಿದೆ.
ಈ ಗ್ರಾಮಗಳಿಗೆ ಸಾರಿಗೆ ಬಸಿನ ಸೌಕರ್ಯವಿಲ್ಲದೆ ಗ್ರಾಮಸ್ಥರು ಸುಮಾರು ನಾಲ್ಕಾರು ಕಿ.ಮೀ. ನಡೆದು ಬಂದು ಬೆಟ್ಟಹಳ್ಳಿ ಕೂಡಿಗೆ ಯಲ್ಲಿ ಬಸ್ ಸೌಕರ್ಯ ಪಡೆಯ ಬೇಕಾಗಿತ್ತು. ಈ ಪ್ರದೇಶ ಕಾಡಾನೆ ಪ್ರದೇಶ ಹಾವಳಿಗೊಳಪಟ್ಟಿರುವ ವಾಗಿರುವುದರಿಂದ ವಿದ್ಯಾರ್ಥಿಗಳು, ಮಹಿಳೆಯರು ಓಡಾಡಲು ಭಯ ಭೀತರಾಗಿದ್ದರು.
ಈಗ ಸಾರಿಗೆ ಬಸ್ ಸೌಕರ್ಯ ಒದಗಿರುವುದರಿಂದ ಭಯಮುಕ್ತ ರಾಗಿ ಓಡಾಡಬಹುದು. ಸಾರ್ವಜನಿಕರು ಮತ್ತು ಪ್ರಯಾಣಿಕರು ಬಸ್ ಚಾಲಕ, ನಿರ್ವಾಹಕರೊಡನೆ ಉತ್ತಮ ಬಾಂಧವ್ಯದಿಂದ ವರ್ತಿಸುವ ಮೂಲಕ ಸೌಕರ್ಯ ಫಲಪ್ರದವಾಗಲೆಂದು ಶಾಸಕರು ಹಾರೈಸಿದರು.