ಶಿರಾಡಿ ಘಾಟ್ ನಲ್ಲಿ ನಿರಂತರ ಅಪಘಾತ ಪ್ರಕರಣ: ಶಾಸಕ ಸಿಮೆಂಟ್ ಮಂಜು ದಿಟ್ಟ ಹೆಜ್ಜೆ.
ಅಪಘಾತಗಳ ತಡೆಗೆ ಲೋಕೋಪಯೋಗಿ ಇಲಾಖೆ ಮುಂದು:ಅಪಘಾತ ವಲಯದ ಪರಿಶೀಲನೆ ನೆಡೆಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ.
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನ ಮಾರನಹಳ್ಳಿಯಿಂದ ಗುಂಡ್ಯ ವರೆಗೂ ನಿರಂತರ ಅಪಘಾತಗಳಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಸೇರಿದಂತೆ ಹಲವಾರು ಖಾಸಗಿ ವಾಹನಗಳು ಅಪಘಾತಕ್ಕೀಡಾಗಿ ಸಾವು, ನೋವುಗಳು ಸಂಭವಿಸಿದ್ದವು. ಅಪಘಾತಗಳ ಸಂಖ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಶಾಸಕರು ಶಿರಾಡಿ ಘಾಟಿನಲ್ಲಿ ಸಂಚರಿಸಿ ವಸ್ತು ಸ್ಥಿತಿಯನ್ನು ಅರಿತು
ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಂಭವಿಸಿದ್ದು, ಸದರಿ ರಸ್ತೆಯು ಘಾಟ್ ವಿಭಾಗವಾದುದರಿಂದ ರಸ್ತೆಯ ಆಕಾರ, ತಿರುವುಗಳ ಹಾಗೂ ಇತರ ಭೌಗೋಳಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳಗಳ ತಕ್ಷಣ ಪರಿಶೀಲನೆಗೆ ಅಧಿಕಾರಿಗಳ ಭೇಟಿ ಅವಶ್ಯಕವಾಗಿದೆ ಎಂದು ಕೆಲವೊಂದು ಮಾರ್ಗೋಪಾಯಗಳನ್ನು ಇಲಾಖೆಗೆ ಶಾಸಕರು ನೀಡಿದ್ದರು.ಅಪಘಾತ ಸಾಧ್ಯ ಪ್ರದೇಶಗಳಲ್ಲಿ ಎಚ್ಚರಿಕೆಯ ಫಲಕಗಳು ಹಾಗೂ ಚಿಹ್ನೆಗಳನ್ನು ಅಳವಡಿಸಬೇಕು.ಅಗತ್ಯವಿದ್ದಲ್ಲಿ ವೇಗ ನಿಯಂತ್ರಣ ಕ್ರಮಗಳು (Speed Breakers, Rumble Strips) ಜಾರಿಗೆ ತರಬೇಕು.ರಸ್ತೆಯ ದೃಶ್ಯತೆ ಸುಧಾರಣೆಗಾಗಿ ರಿಪ್ಲೇಕ್ಟಿವ್ ಸೂಚಕಗಳು ಹಾಗೂ ಬೆಳಕು ವ್ಯವಸ್ಥೆ ಮಾಡಬೇಕು. ಈ ಭಾಗದಲ್ಲಿ ನಿಯಮಿತ ನಿಗಾವಹಿಸಿ ಹಾಗೂ ಸುಧಾರಣಾ ತಂಡವನ್ನು ನೇಮಿಸಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದೀಗ ಶಾಸಕರ ಮನವಿಗೆ ಲೋಕೋಪಯೋಗಿ ಇಲಾಖೆ ಅಪಘಾತಗಳನ್ನು ತಡೆಗಟ್ಟುವುದಕ್ಕೆ ಏನೆಲ್ಲಾ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನೀಡಿ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಸಮಯೋಚಿತವಾಗಿ ಕಾರ್ಯನಿರ್ವಹಿಸಿದ ಶಾಸಕರಿಗೆ ವಾಹನ ಸವಾರರು,ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.