ಸಕಲೇಶಪುರದಲ್ಲಿ ಹೃದಯಾಘಾತಕ್ಕೆ ರೈತ ಬಲಿ
ಸಕಲೇಶಪುರ :ತಾಲ್ಲೂಕಿನ ಬೆಳಗೋಡು ಹೋಬಳಿ ಮೆಣಸಮಕ್ಕಿ ಗ್ರಾಮದ ಲಕ್ಶ್ಮಣ (52) ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಜಮೀನಿಗೆ ಹೋಗಿ ಮನೆಗೆ ಹಿಂದಿರುಗುವಾಗ ಎದೆ ನೋವು ಕಾಣಿಸಿಕೊಂಡು ತುರ್ತು ಚಿಕಿತ್ಸೆ ವಾಹನ ಮನೆಯ ಬಳಿ ತೆರಳುವ ವೇಳೆಗೆ ಮನೆ ಹತ್ತಿರ ಹೋಗುವಷ್ಟರಲ್ಲಿ ರೈತ ಲಕ್ಷ್ಮಣ್ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಹಾಗಾಗಿ ಒಂದುವರೆ ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಬಲಿಯಾದವರ ಸಂಖ್ಯೆ 38ಕ್ಕೆ ಏರಿದೆ.