Friday, May 9, 2025
Homeಸುದ್ದಿಗಳುಸಕಲೇಶಪುರಆಪರೇಷನ್ ಸಿಂಧೂರ್ ಯಶಸ್ಸಿಗೆ : ಸಕಲೇಶಪುರದಲ್ಲಿ ಕಾಂಗ್ರೆಸ್ ಹರ್ಷೋದ್ಗಾರ

ಆಪರೇಷನ್ ಸಿಂಧೂರ್ ಯಶಸ್ಸಿಗೆ : ಸಕಲೇಶಪುರದಲ್ಲಿ ಕಾಂಗ್ರೆಸ್ ಹರ್ಷೋದ್ಗಾರ

ಆಪರೇಷನ್ ಸಿಂಧೂರ್ ಯಶಸ್ಸಿಗೆ : ಸಕಲೇಶಪುರದಲ್ಲಿ ಕಾಂಗ್ರೆಸ್ ಹರ್ಷೋದ್ಗಾರ

ಸಕಲೇಶಪುರ, ಮೇ 8: ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಸಕಲೇಶಪುರದ ಹಳೆ ಬಸ್ ನಿಲ್ದಾಣದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ವಿಶೇಷ ಹರ್ಷೋದ್ಗಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರು ಶ್ರೀ ಮುರಳಿ ಮೋಹನ್ ಮಾತನಾಡಿ, “ಭಾರತದ ವೀರ ಸೈನಿಕರು ದೇಶದ ಗಡಿ ರಕ್ಷಿಸಲು ತ್ಯಾಗಮಯ ಸೇವೆ ಸಲ್ಲಿಸುತ್ತಿದ್ದಾರೆ. ‘ಆಪರೇಷನ್ ಸಿಂಧೂರ್’ ಒಂದು ಗೌರವದ ಸಂಕೇತವಾಗಿದೆ. ನಾವು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಸೈನಿಕರ ಶೌರ್ಯಕ್ಕೆ ನಮಸ್ಕಾರ ಹೇಳುವ ಸಮಾನ,” ಎಂದರು.

ಪಕ್ಷದ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದು, ಸೈನಿಕರ ಘನತೆಗೆ ಗೌರವ ಸಲ್ಲಿಸಿದರು. ರಾಷ್ಟ್ರಧ್ವಜ ಹಾರಿಸಿ, ಪಟಾಕಿ ಸಿಡಿಸಿ, ಸೈನಿಕರ ತ್ಯಾಗವನ್ನು ಸ್ಮರಿಸಿ, ದೇಶಭಕ್ತಿಯ ಘೋಷಣೆಗಳಿಂದ ಕಾರ್ಯಕ್ರಮ ಗಂಭೀರ ಹಾಗೂ ಭಾವನಾತ್ಮಕ ವಾತಾವರಣವನ್ನು ಸೃಷ್ಟಿಸಿತು.

ಪ್ರತಿಭಟನೆಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಸೈಯದ್ ಮುಫೀಜ್, ಕೆಪಿಸಿಸಿ ಸದಸ್ಯ ಕೊಳ್ಳಹಳ್ಳಿ ಸಲೀಂ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ, ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷ ಮೊಹಮ್ಮದ್ ಹನೀಫ್, ಕಾಂಗ್ರೆಸ್ ಮುಖಂಡರಾದ ವಿಜಯ್ ಕುಮಾರ್, ಗೋದ್ದು ಲೋಕೇಶ್, ಬೈಕೆರೆ ದೇವರಾಜ್, ಗ್ಯಾರೆಂಟಿ ಸಮಿತಿಯ ಮಮತಾ, ಹಸೀನಾ ಹುರುಡಿ, ವೆಂಕಟೇಶ್, ಕೌಸಲ್ಯ ಲಕ್ಷ್ಮಣ್ ಗೌಡ, ಪುರಸಭೆ ನಾಮನಿ ಸದ್ಯಕ್ಕೆ ಬಿಲ್ಕಸ್ ರಾಣಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular