ಸ್ಕೂಟಿಯಿಂದ ಹಣ ಕದ್ದು ಕಳ್ಳರು ಪರಾರಿ – 13 ಲಕ್ಷ ಹಣ ಕಳ್ಳತನ
ಸಕಲೇಶಪುರ : ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಸಕಲೇಶಪುರ ನಗರದ ಬಿ. ಎಂ ರಸ್ತೆಯಲ್ಲಿ ನಡೆದಿದೆ.
ಕುಡುಗರಹಳ್ಳಿಯ ಯೋಗೇಶ್ ಹಣ ಕಳೆದುಕೊಂಡ ವ್ಯಕ್ತಿ. ತುರ್ತು ಕಾರ್ಯದ ನಿಮಿತ್ತ ಮನೆಯಲ್ಲಿದ್ದ ಚಿನ್ನಾಭರಣವನ್ನು ನಗರದ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಗಿರವಿ ಇಟ್ಟು 13 ಲಕ್ಷ ಪಡೆದಿದ್ದ ಯೋಗೇಶ್ ಅವರು ಉಳಿದ 2.5 ಲಕ್ಷ ಹಣವನ್ನು ಡ್ರಾ ಮಾಡಲು ಕೆನರಾ ಬ್ಯಾಂಕಿಗೆ ಆಗಮಿಸಿದ್ದಾರೆ. ಈ ನಡುವೆ ಕೆನರಾ ಬ್ಯಾಂಕಿನೊಳಗೆ ಹೋಗುವ ಮುನ್ನ ತಮ್ಮ ಸ್ಕೂಟಿ ಯ ಸೇಫ್ಟಿ ಬಾಕ್ಸ್ ನಲ್ಲಿ ಬ್ಯಾಂಕ್ ಆಫ್ ಬರೋಡದಿಂದ ತಂದಿದ್ದ 13ಲಕ್ಷ ಹಣವನ್ನು ಇಟ್ಟು ಕೆನರಾ ಬ್ಯಾಂಕಿನೊಳಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಬೈಕಿನ ಬಾಕ್ಸ್ ಮುರಿದು ಹಣ ಕದ್ದು ಎಸ್ಕೇಪ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಣ ಕಳೆದುಕೊಂಡ ಯೋಗೇಶ್ ಪರಿತಪ್ಪಿಸುತ್ತಿದ್ದಾರೆ.