ಪಾನೀಯ ತುಂಬಿದ ಲಾರಿ ಪಲ್ಟಿ
ಸಕಲೇಶಪುರ : ಚಾಲಕನ ನಿಯಂತ್ರಣ ತಪ್ಪಿ ಪಾನೀಯ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ನೆಡೆದಿದೆ.
ತಾಲೂಕಿನ ಬಾಳ್ಳುಪೇಟೆ ಸಮೀಪ ಸಿದ್ದಣ್ಣಯ್ಯ ಶಾಲಾ ಮುಂಭಾಗ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ನೆಡೆದಿದ್ದು ಸಣ್ಣಪುಟ್ಟ ಗಾಯಗಳಿಂದ ಲಾರಿ ಚಾಲಕ ಬಚಾವಾಗಿದ್ದಾನೆ.
ಪುತ್ತೂರಿನಿಂದ ಬಿಂದು ಜೀರಾ ಪಾನೀಯ ತುಂಬಿಸಿಕೊಂಡು ಕೋಲಾರಕ್ಕೆ ಕ್ಯಾಂಟರ್ ಲಾರಿ ಹೊರಟಿತ್ತು.ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ರಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.