Thursday, March 13, 2025
Homeಸುದ್ದಿಗಳುಸಕಲೇಶಪುರಮನಸ್ಸಿದಲ್ಲಿ ಹೆಣ್ಣು ಮಕ್ಕಳು ಏನು ಬೇಕಾದರು ಸಾಧನೆ ಮಾಡಬಹುದು: ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್...

ಮನಸ್ಸಿದಲ್ಲಿ ಹೆಣ್ಣು ಮಕ್ಕಳು ಏನು ಬೇಕಾದರು ಸಾಧನೆ ಮಾಡಬಹುದು: ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ –  ಸುಮನಾ ಜಯಪ್ರಕಾಶ್ 

ಮನಸ್ಸಿದಲ್ಲಿ ಹೆಣ್ಣು ಮಕ್ಕಳು ಏನು ಬೇಕಾದರು ಸಾಧನೆ ಮಾಡಬಹುದು: ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ –  ಸುಮನಾ ಜಯಪ್ರಕಾಶ್ 
ಸಕಲೇಶಪುರ: ನಾಲ್ಕು ಗೋಡೆಗೆ ಸೀಮಿತರಾಗದೆ ತಮ್ಮ ಪ್ರತಿಭೆಯನ್ನು ಹೊರ ಹಾಕಲು ಪ್ರತಿಯೋರ್ವ ಹೆಣ್ಣು ಮಕ್ಕಳು ಮುಂದಾಗಬೇಕೆಂದರು ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್  ಡಾ.ಸುಮನಾ ಜಯಪ್ರಕಾಶ್  ಹೇಳಿದ್ದಾರೆ.         
     ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಕಲೇಶ್ವರಿ ಒಕ್ಕಲಿಗರ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಗಂಡಿಗೆ ಹೆಣ್ಣು ಸಮನಾಗಿ ದುಡಿಯುತಿದ್ದು ಬಹುತೇಕ ಕುಟುಂಬಗಳ ಆಧಾರಸ್ತಂಬವಾಗಿದ್ದಾರೆ.  ಹೆಣ್ಣಿನ ಒಡಲಾಳದಲ್ಲಿ ಯಾವ ರೀತಿಯ ಶಕ್ತಿ ಅಡಗಿರುತ್ತದೆ ಎಂಬ ಅರಿವು ಯಾರಿಗೂ ಇರುವುದಿಲ್ಲ. ಇಂತಹ ಪ್ರತಿಬೆಯನ್ನು ಹೊರಬರಲು ಕುಟುಂಬಸ್ಥರ ಸಹಕಾರ ಅತ್ಯಗತ್ಯ. ಹೆಣ್ಣು ಇಂದು ಎಲ್ಲಾ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ. ಹೆಣ್ಣು ಮಕ್ಕಳು ಸಾಧನೆ ಮಾಡಲು ಗುರಿಯಿಟ್ಟುಕೊಂಡರೆ ಏನು ಬೇಕಾದರು ಸಾಧಿಸಬಹುದಾಗಿದೆ. ಈ ಸ್ಪರ್ಧಾತ್ಮಕ ಯುಗ 
ದಲ್ಲಿರುವ ನಾವು ಹೆಣ್ಣನ್ನು ಎರಡನೇ ದರ್ಜೆಯಲ್ಲಿಟ್ಟು ನೋಡುವುದು ತಪ್ಪು. ಹೆಣ್ಣು ಸಹ ತಮಗೆ ಸಿಕ್ಕಿರುವ ಸ್ವತಂತ್ರವನ್ನು ದುರುಪಯೋಗ ಪಡಿಸಿಕೊಳ್ಳದೆ ಮನೆತನದ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೀರ್ತಿ ತರುವ ಕೆಲಸಮಾಡ ಬೇಕು ಎಂದರು. 
   ಸಕಲೇಶ್ವರಿ ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷೆ ವಾಸಂತಿ ಮಲ್ಲೇಶ್ ಗೌಡ ಮಾತನಾಡಿ ಸಕಲೇಶ್ವರಿ ಒಕ್ಕಲಿಗ ಮಹಿಳಾ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಸಮಾಜದ ಮಹಿಳೆಯರ ಧ್ವನಿಯಾಗಿ  ನಿಂತಿದೆ. ಸಂಘಟನೆಯ ಅಡಿಯಲ್ಲಿ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾ‘ನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಈ ಬಾರಿ ಮಾಡಲಾಗಿದೆ. ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಘಟನೆ ವತಿಯಿಂದ ಆಚರಿಸಲಾಗುತ್ತಿದ್ದು ಈ ಸಂಧರ್ಭದಲ್ಲಿ ಮಹಿಳೆಯರಿಗಾಗಿ ವಿವಿಧ ಆಟೋಟಗಳನ್ನು ಆಯೋಜಿಸಲಾಗುತ್ತಿದೆ. ಎಂದರು.
       ಕಾರ್ಯಕ್ರಮದಲ್ಲಿ  ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ತೊರಿದ ಗಣ್ಯರನ್ನು ಸನ್ಮಾನಿಸಲಾಯಿತು. ಗ್ರೂಪ್ ಡ್ಯಾನ್‌ಸ್ ಸೇರಿದಂತೆ ವಿವಿಧ ಆಟೋಟಗಳನ್ನು ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು.
     ಕಾರ್ಯಕ್ರಮದಲ್ಲಿ ವೇದಿಕೆಯ ಉಪಾಧ್ಯಕ್ಷೆಸುಷ್ಮಾ ಅನಿಲ್, ಕಾರ್ಯದರ್ಶಿ ಸುಷ್ಮಾ ವಿಜಿತ್,  ಸಹಕಾರ್ಯದರ್ಶಿ ಮಮತಾ ಉದಯ್,  ಖಚಾಂಚಿ ರತ್ನ ಮನೋಹರ್ ಸದಸ್ಯರುಗಳಾದ ವೇಣಿ ನಾರಾಯಣ್, ಸುಧಾ ಅಶೋಕ್, ಆಶಾಪ್ರಕಾಶ್ ,ಶ್ವೇತಾ ಮಹೇಂದ್ರ, ಇಂದಿರಾ ಹಾಲಪ್ಪ, ಶೀಲ ಸುಧಾಕರ್, ಜಯಶೀಲ ಮಹೇಶ್, ಮೀನಾಕ್ಷಿ ವಿಶ್ವನಾಥ್, ಸವಿತಾ ವಿಷ್ಣುಮೂರ್ತಿ, ಮಾಲಿನಿ ವಿಶ್ವನಾಥ್, ಆಶಾ ರಾಜು ಮುಂತಾದವರಿದ್ದರು.           
RELATED ARTICLES
- Advertisment -spot_img

Most Popular