ಸಕಲೇಶಪುರ: ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ವ್ಯಕ್ತಿಯೋರ್ವರ ಮೇಳೆ ಕಾಟಿಯೊಂದು ದಾಳಿ ಮಾಡಿದ ಪರಿಣಾಮ ಗಾಯಗೊಂಡು ಪಟ್ಟಣದ ಸರ್ಕಾರಿ ಕ್ರಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ತಾಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ಗ್ರಾಮದ ಸಣ್ಣ ರೈತ ಲೋಕೇಶ್ (50) ಎಂಬುವರು ಕಾಟಿಯಿಂದ (ಕಾಡುಕೋಣ)ದಿಂದ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ತಮ್ಮ ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಮದ್ಯಾಹ್ನದ ವೇಳೆ ಏಕಾಏಕಿ ಬಂದ ಕಾಟಿಯೊಂದು ದಾಳಿ ಮಾಡಿ ಅವರ ಎದೆಯ ಭಾಗಕ್ಕೆ ಕೋಡಿನಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಸಿದ್ದು ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದು ತಕ್ಷಣ ಪಟ್ಟಣದ ಕ್ರಾಪರ್ಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹಾಸನದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.ಗಾಯಾಳುವನ್ನು ಶಾಸಕ ಸಿಮೆಂಟ್ ಮಂಜು ಭೇ mಟಿ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದರು. ನಂತರ ಮಾತನಾಡಿದ ಶಾಸಕರು ಸಕಲೇಶಪುರ, ಬೇಲೂರು, ಆಲೂರು ತಾಲೂಕುಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಕಳೆದ ಎರಡು ದಿನಗಳ ಹಿಂದಷ್ಟೆ ತಾಲೂಕಿನ ಗಡಿಗ್ರಾಮ ಬೇಲೂರು ತಾಲೂಕು ವ್ಯಾಪ್ತಿಯ ಬ್ಯಾದನೆಯಲ್ಲಿ ಕಾಡಾನೆ ನಡೆಸಿದ ದಾಳಿಯಿಂದಾಗಿ 26 ವರ್ಷದ ಯುವಕನೋರ್ವ ಮೃತಪಟ್ಟಿದ್ದು ಇದು ಮರೆಯುವ ಮುನ್ನವೆ ಕಾಟಿಯೊಂದು ಕ್ಯಾಮನಹಳ್ಳಿ ಗ್ರಾಮದ ಲೋಕೇಶ್ ಎಂಬುವರ ಮೇಲೆ ಕಾಟಿ ದಾಳಿ ನಡೆಸಿದೆ. ಅದೃಷ್ಟವಷಾತ್ ಲೋಕೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನಲ್ಲಿ ಮಾನವ ಪ್ರಾಣಿಗಳ ಸಂಘರ್ಷ ನಿರಂತರವಾಗಿ ಮುಂದುವರೆದಿದ್ದು ಪ್ರಾಣಿಗಳ ಉಪಟಳದಿಂದ ಇಲ್ಲಿನ ಕಾಫಿ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಬೇಸತ್ತಿದ್ದಾರೆ. ಒಂದು ಕಡೆ ಕಾಡಾನೆಗಳ ಹಾವಳಿಯಾದರೆ ಮತ್ತೊಂದೆಡೆ ಕಾಡು ಕೋಣಗಳ( ಕಾಟಿ) ಉಪಟಳ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಕಾಡಾನೆ ಹಾಗೂ ಕಾಟಿಗಳನ್ನು ಕೇವಲ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಿಸಲು ಮಾತ್ರ ಆದ್ಯತೆ ಕೊಡುತ್ತಿದ್ದಾರೆ. ಆದರೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯುವಲ್ಲಿ ವಿಪಲರಾಗಿದ್ದಾರೆ. ಕೂಡಲೆ ಅರಣ್ಯ ಇಲಾಖೆಯವರು ಕಾಡಾನೆ ಹಾಗೂ ಕಾಟಿಗಳ ನಿಯಂತ್ರಣಕ್ಕೆ ಸೂಕ್ತ ಯೋಜನೆಯನ್ನು ರೂಪಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ವಿರುದ್ದ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಕ್ಯಾಮನಹಳ್ಳಿ ಗ್ರಾ.ಪಂ ಅಧ್ಯಕ್ಷ ಸಚ್ಚಿನ್, ಬಿಜೆಪಿ ಮುಖಂಡ ರಾಜ್‌ಕುಮಾರ್, ಹಾನುಬಾಳ್ ಡಿಆರ್‌ಎ್ಓ ದರ್ಶನ್ ಸೇರಿದಂತೆ ಇತರರು ಹಾಜರಿದ್ದರು.