ಸಕಲೇಶಪುರ ತಹಸೀಲ್ದಾರ್ ಮೇಘನಾ. ಜಿ ವರ್ಗಾವಣೆ
ನೂತನ ತಹಸೀಲ್ದಾರ್ ಆಗಿ ಕೆ.ಎಂ ಅರವಿಂದ್ ನೇಮಕ
ಸಕಲೇಶಪುರ : ಸುಮಾರು ಎರಡು ವರ್ಷಗಳ ಅವಧಿವರೆಗೂ ಸಕಲೇಶಪುರ ತಹಸೀಲ್ದಾರ್ ರಾಗಿ ಕರ್ತವ್ಯ ನಿರ್ವಹಿಸಿದ ಮೇಘನಾ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ.
ಇವರ ಸ್ಥಾನಕ್ಕೆ ಮಂಗಳೂರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರವಿಂದ್ ಕೆ. ಎಂ(ಗ್ರೇಡ್ -2) ಅವರನ್ನು ಸರ್ಕಾರ ನೇಮಕಗೊಳಿಸಿದೆ. ವರ್ಗಾವಣೆಗೊಂಡಿರುವ ಮೇಘನ ಅವರಿಗೆ ಇನ್ನೂ ಸ್ಥಳ ನಿಯೋಜನೆಗೊಳಿಸದೆ ಸರ್ಕಾರ ವರ್ಗಾವಣೆ ಮಾಡಿದೆ.