ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಗುಚಿ ಬಿದ್ದ ಲಾರಿ : ಇಬ್ಬರಿಗೆ ಗಾಯ
ಸಕಲೇಶಪುರ : ಪ್ಲೇವುಡ್ ಶೀಟ್ ತುಂಬಿದ ಲಾರಿ ಮಂಗಳೂರು ನಿಂದ ಬೆಂಗಳೂರಿಗೆ ತೆರಳುತ್ತಿತ್ತು, ಘಟನೆಯಿಂದ ಲಾರಿ ಚಾಲಕ ಹಪೀಜ್ (25) ಹಾಗೂ ನಿಜಾಮ್ (24)ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರತಿಷ್ಠಾಪಕ ಕಾಮಗಾರಿ ನಡೆಯುತ್ತಿದ್ದ ಕಳೆದ ಮಳೆಗಾಲದಲ್ಲಿ ಹೊಸೂರು ಬಳಿ ಕುಸಿತವಾಗಿತ್ತು, ರಸ್ತೆಯ ಒಂದು ಭಾಗ ಕುಸಿದು 9 ತಿಂಗಳಾದರೂ ದುರಸ್ಥಿ ಮಾಡದೆ ಇರುವುದ್ದರಿಂದ ಅಪಘಾತ ಸಂಭವಿಸಲು ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ತಿಂಗಳು ಟೈಲ್ಸ್ ತುಂಬಿದ ಲಾರಿ ರಸ್ತೆಯಿಂದ ಮಗುಚಿ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಸಕಲೇಶಪುರ ಕಡೆಯಿಂದ ಬರುವ ವಾಹನಗಳು ಎರಡು ಬದಿಯಿಂದ ಸಂಚಾರಿಸುವ ವೇಳೆ ಹೊಸೂರು ಬಳಿ ಒಂದು ಬದಿಯಲ್ಲಿ ವಾಹನ ಚಲಿಸಲು ಸಿಮೆಂಟ್ ಬ್ಲಾಕ್ ಗಳನ್ನು ಅಳವಡಿಸಿರುವುದು ಹಾಗೂ ಯಾವುದೇ ಸೂಚನಾ ಫಲಕ ಸೂಕ್ತವಾಗಿಲ್ಲದೆ ಇರುವುದು ವಅಪಘಾತಕ್ಕೆ ಪ್ರಮುಖ ಕಾರಣವಾಗಿದ್ದು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರು ಸೂಕ್ತ ಕ್ರಮ ಕೈಗೊಳ್ಳುವಂತೆ ಮನಸ ಬರಬಹುದು ವಾಹನ ಸವಾರರು ಅಗ್ರಹಿಸಿದ್ದಾರೆ.