Saturday, February 22, 2025
Homeಸುದ್ದಿಗಳುಸಕಲೇಶಪುರಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಗಿದ್ದ ತಡೆಯಾಜ್ಞೆ ತೆರೆವು ಆಡಿಸಲು ಅವಕಾಶ:ಪುರಸಭೆ ಹಾಗೂ ಗುತ್ತಿಗೆದಾರರರಿಗೆ...

ಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಗಿದ್ದ ತಡೆಯಾಜ್ಞೆ ತೆರೆವು ಆಡಿಸಲು ಅವಕಾಶ:ಪುರಸಭೆ ಹಾಗೂ ಗುತ್ತಿಗೆದಾರರರಿಗೆ ರಿಲೀಫ್ :ಸಾರ್ವಜನಿಕರಿಗೆ ಬಿಗ್ ರಿಲೀಫ್

ಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಗಿದ್ದ ತಡೆಯಾಜ್ಜೆ ತೆರವು :ಪುರಸಭೆ ಹಾಗೂ ಗುತ್ತಿಗೆದಾರರರಿಗೆ ಬಿಗ್ ರಿಲೀಫ್ 

ಸಕಲೇಶಪುರ : ಸಾರ್ವಜನಿಕರಿಗೆ ಸುರಕ್ಷತೆ ಇಲ್ಲಾ ಎಂಬ ನೆಪದಲ್ಲಿ ಸಕಲೇಶಪುರ ಪಟ್ಟಣದಲ್ಲಿ ನಡೆಯುತ್ತಿರುವ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನದಲ್ಲಿ ಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಚಾಲನೆ ಮಾಡಬಾರದೆಂದು ಕೆಲವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದು ಈ ಹಿನ್ನೆಲೆಯಲ್ಲಿ ಪ್ರಕರಣ ಸೋಮವಾರ ಹೈಕೋರ್ಟ್ ನಲ್ಲಿ ನ್ಯಾಯಾಧೀಶ ಸಂಜಯ್ ಗೌಡ ರವರ ಮುಂದೆ ಮತ್ತೊಮ್ಮೆ ವಾದ ವಿವಾದ ನಡೆಯಿತು. ಆದರೆ ಪುರಸಭೆ ಪರ ವಕೀಲರು ಪ್ರಬಲವಾಗಿ ವಾದ ಮಂಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಜಾಯಿಂಟ್ ವೀಲ್ ಹಾಗೂ ಕೊಲಂಬಸ್ಗೆ ಹೈಕೋರ್ಟ್ ತಡೆಯಾಜ್ಞೆ ಮುಂದುವರೆದಿತ್ತು. ಮಲ್ನಾಡ್ ಕಾಲೇಜ್ ಅಪ್ ಇಂಜಿನೀಯರಿಂಗ್ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಮತ್ತೊಮ್ಮೆ ಪರೀಕ್ಷೆ ನಡೆಸಿ ವರದಿ ತೆಗೆದುಕೊಂಡು ಮಂಗಳವಾರ ಮತ್ತೊಮ್ಮೆ ಕೋರ್ಟ್ ವಿಚಾರಣೆಗೆ ಹಾಜರಾಗಲು ಆದೇಶ ನೀಡಲಾಗಿತ್ತು. ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಲೋಕೋಪಯೋಗಿ ಇಲಾಖೆಯವರು ಜಾಯಿಂಟ್ ವೀಲ್, ಕೋಲಂಬಸ್ ನಿಂದ ಯಾವುದೇ ಅಪಾಯವಿಲ್ಲ ಎಂದು ವರದಿ ನೀಡಿದ್ದು ಇದರಿಂದಾಗಿ ಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಮೇಲಿದ್ದ ನ್ಯಾಯಾಲಯದ ತಡೆಯಾಜ್ಞ ತೆರವುಗೊಂಡಿದೆ. ಕೆಲವು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಜಾತ್ರಾ ಗುತ್ತಿಗೆದಾರರು ಜಾಯಿಂಟ್ ವೀಲ್ ಹಾಗೂ ಕೊಲಂಬಸ್. ನಡೆಸಲು ಅವಕಾಶ ದೊರಕಿದ್ದು ಗುತ್ತಿಗೆದಾರರು ಹಾಗೂ ಪುರಸಭೆಯ ಆಡಳಿತ ಇದರಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ

RELATED ARTICLES
- Advertisment -spot_img

Most Popular