ಮನೆಯಲ್ಲಿ ಅಡುಗೆ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆ ಪ್ರಕರಣ : ಸಂತ್ರಸ್ತರ ಕಷ್ಟಕ್ಕೆ ಮಿಡಿದ ಶಾಸಕ ಸಿಮೆಂಟ್ ಮಂಜು.
ಆಸ್ಪತ್ರೆ ವೆಚ್ಚಕ್ಕೆ ವೈಯಕ್ತಿಕವಾಗಿ ಧನಸಹಾಯ ನೀಡಿದ ಶಾಸಕರು.
ಆಲೂರು : ಜನವರಿ 10 ರಂದು ಆಲೂರು ತಾಲ್ಲೂಕಿನ ಕವಳಿಕೆರೆ ಗ್ರಾಮದ ಯೋಗೇಶ್ ಮನೆಯಲ್ಲಿ ಅಡುಗೆ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಿಂದ ಸ್ಫೋಟಗೊಂಡು ಮನೆ ಸಂಪೂರ್ಣವಾಗಿ ಜಖಂ ಗೊಂಡಿದ್ದಲ್ಲದೆ ಯೋಗೇಶ್ ಪತ್ನಿ ಶ್ರುತಿ(28) ಶೇ. 70 ರಷ್ಟು ಸುಟ್ಟು ಗಾಯಗಳಾಗಿ ಮೈಸೂರಿನ ಜೆ.ಎಸ್. ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕುಟುಂಬಸ್ಥರಿಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ವೈಯಕ್ತಿಕವಾಗಿ 25 ಸಾವಿರ ರೂ ನೀಡಿದರು.
ಗುರುವಾರ ಶಾಸಕ ಸಿಮೆಂಟ್ ಮಂಜು ಪ್ರಭಾರಿ ತಹಸ್ಸಿಲ್ದಾರ್ ಪೂರ್ಣಿಮಾ ಹಾಗೂ ಆಹಾರ ನಿರೀಕ್ಷಿರೊಡನೆ ಗಾಯಳು ಶ್ರುತಿ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ ಕುಟುಂಬಸ್ಥರಿಗೆ 25 ಸಾವಿರ ರೂ ನೀಡಿದರು ಈ ಸಂದರ್ಭದಲ್ಲಿ ಕುಟುಂಬಸ್ಥರು ಶೇ.70 ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿರುವ ಶೃತಿ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದೇವೆ ಮೈಸೂರಿನ ಜಿ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಪ್ರತಿನಿತ್ಯ ಸಾವಿರಾರು ರೂ ಖರ್ಚು ಬರುತ್ತಿದೆ ವೆಚ್ಚ ಬರಿಸಲು ಸಾಧ್ಯವಾಗುತ್ತಿಲ್ಲವೆಂದು ಕುಟುಂಬಸ್ಥರು ಶಾಸಕರ ಬಳಿ ಹೇಳಿಕೊಂಡು ಕಣ್ಣೀರು ಸುರಿಸಿದರು ಆಸ್ಪತ್ರೆ ವೆಚ್ಚ ಭರಿಸಲು ನಾನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಆದಷ್ಟು ಬೇಗ ಸರ್ಕಾರಕ್ಕೆ ವರದಿ ನೀಡುವಂತೆ ಸ್ಥಳದಲ್ಲಿದ್ದ ಪ್ರಭಾರಿ ತಹಸ್ಸಿಲ್ದಾರ್ ಪೂರ್ಣಿಮಾ ಅವರಿಗೆ ಸೂಚಿಸಿದರು ತಕ್ಷಣ ಭಾರತ್ ಗ್ಯಾಸ್ ಮುಖ್ಯಸ್ಥರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕುಟುಂಬಸ್ಥರು ಇದ್ದ ಮನೆ ಕಳೆದುಕೊಂಡು ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗದೆ ಕೈಕಟ್ಟಿ ಕುಳಿತ್ತಿದ್ದಾರೆ ಅವರಿಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಶಾಸಕ ಸಿಮೆಂಟ್ ಮಂಜು ತಾಲ್ಲೂಕಿನ ಕವಳಿಕೆರೆ ಗ್ರಾಮದ ಯೋಗೇಶ್ ಪತ್ನಿ ಶೃತಿ 12 ದಿನಗಳ ಹಿಂದೆ ಅಡಿಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಿಂದ ಸಿಲೆಂಡರ್ ಸ್ಪೋಟಗೊಂಡು ಮನೆ ಸಂಪೂರ್ಣವಾಗಿ ಜಖಂಗೊಂಡಿದೆ ಶ್ರುತಿ ಶೇ.70 ರಷ್ಟು ಸುಟ್ಟ ಗಾಯಗಳಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಇದರಿಂದ ಅವರ ಕುಟುಂಬ ದಿನನಿತ್ಯದ ಆಸ್ಪತ್ರೆ ಖರ್ಚು ಬರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ ವಾಸವಿದ್ದ ಮನೆಯೂ ಕೂಡ ಸಂಪೂರ್ಣವಾಗಿ ಬೆಂದು ಹೋಗಿದೆ ಈಗಾಗಲೇ ಅವರ ಕುಟುಂಬಕ್ಕೆ ನನ್ನ ಕೈಲಾದಷ್ಟು ಆರ್ಥಿಕ ಸಹಾಯ ಮಾಡುವುದರ ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಇದರ ಜೊತೆಗೆ ಭಾರತ್ ಗ್ಯಾಸ್ ಕಂಪನಿ ಮುಖ್ಯಸ್ಥರ ಜೊತೆಯೂ ಮಾತನಾಡಿದ್ದು ಮನೆ ದುರಸ್ಥಿ ಹಾಗೂ ಆಸ್ಪತ್ರೆ ವೆಚ್ಚ ಭರಿಸಲು ಮನವಿ ಮಾಡಲಾಗಿದೆ ಸಾರ್ವಜನಿಕರೂ ಕೂಡ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಭಾರಿ ತಹಸೀಲ್ದಾರ್ ಪೂರ್ಣಿಮಾ,ಆಹಾರ ನಿರೀಕ್ಷಕ ಮೋಹನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಅಬ್ಬನ, ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್,ನಟರಾಜ್ ಸೋಂಪುರ, ದ್ರುವ ಸೇರಿದಂತೆ ಸ್ಥಳೀಯ ಜನಪ್ರತಿನಿದಿನಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.