ವಳಲಹಳ್ಳಿ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ
ಸಕಲೇಶಪುರ : ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ರೂಪ ಬಿ. ಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಅಧ್ಯಕ್ಷರ ಚುನಾವಣೆಗೆ ಹಿಂದೆ ಅಧ್ಯಕ್ಷರಾಗಿದ್ದ ಶೀಲಾ ಮಹೇಂದ್ರ ಪಂಚಾಯಿತಿ ಹಣ ದುರ್ಬಳಕೆ ಹಿನ್ನೆಲೆಯಲ್ಲಿ ಸಹ ಸದಸ್ಯರು ಅವಿಶ್ವಾಸ ನಿರ್ಣಯದ ಮೂಲಕ ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಿದ್ದರು.ಇಂದು ನೆಡೆದ ಅಧ್ಯಕ್ಷರ ಚುನಾವಣೆಯಲ್ಲಿ
ಬಿಸಿಎಂ (ಎ) ಮಹಿಳೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪುನಃ ಈ ಹಿಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶೀಲಾ ಮಹೇಂದ್ರ ಸ್ಪರ್ಧೆ ಮಾಡಲು ಮುಂದಾಗಿದ್ದರು ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಬೆಂಬಲತದಿಂದ ಹೊರಬಂದು ಸ್ಪರ್ಧಿಸಿದ್ದರು ಆದರೆ ಶೀಲಾ ಪರವಾಗಿ ಯಾರು ಸೂಚಕರಿಲ್ಲದ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತಗೊಂಡಿತ್ತು. ಪಂಚಾಯತ್ ರಾಜ್ ಕಾಯ್ದೆ ಅನ್ವಯ ಬಿಸಿಎಂ(ಎ) ಸ್ಥಾನಕ್ಕೆ ಅಭ್ಯರ್ಥಿಗಳಿಲ್ಲದ ಸಂದರ್ಭದಲ್ಲಿ ಬಿಸಿಎಂ(ಬಿ) ಮಹಿಳೆ ಸ್ಪರ್ಧೆಗೆ ಅವಕಾಶ ನೀಡಿದ ಚುನಾವಣಾ ಅಧಿಕಾರಿ ಬಿಸಿಎಂ(ಬಿ) ಯಿಂದ ಡಿ. ಸಿ ರೂಪ ಸ್ಪರ್ಧೆಗಿಳಿದಿದ್ದರು. ರೂಪ ಅವರಿಗೆ ಸದಸ್ಯ ಆನಂದ್ ಸೂಚಕರಾಗಿ ಸಹಿ ಮಾಡಿದರು. ಹಾಗಾಗಿ ಅಂತಿಮವಾಗಿ ಅಧ್ಯಕ್ಷ ಗಾದಿಗೆ ಏಕೈಕ ಅಭ್ಯರ್ಥಿಯಾಗಿದ್ದ ರೂಪ ಡಿ. ಸಿ ಅವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಘೋಷಣೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಜಿ ಮೇಘನಾ ಕರ್ತವ್ಯ ನಿರ್ವಹಿಸಿದ್ದರು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೂಪ ಮಾತನಾಡಿ,ಶಾಸಕರಾದ ಸಿಮೆಂಟ್ ಮಂಜು ತಾಲೂಕು ಅಧ್ಯಕ್ಷರಾದ ಅಶ್ವಥ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುತ್ತೇನೆ. ಪಂಚಾಯತಿ ಎಲ್ಲರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್,ಬಿಜೆಪಿ ಎಂದಿಗೂ ಭ್ರಷ್ಟಾಚಾರದ ಪರವಾಗಿಲ್ಲ ಹಾಗಾಗಿಯೆ ಈ ಹಿಂದಿನ ಅಧ್ಯಕ್ಷರ ಮೇಲೆ ಹಣ ದುರ್ಬಳಕೆ ಆರೋಪ ಬಂದಾಗ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ತಿಳಿಸಲಾಗಿತ್ತು ಆದರೂ ಮೊಂಡುತನದಿಂದ ಮುಂದುವರಿದ್ದರಿಂದ ಇತರೆ ಸದಸ್ಯರು ಅವಿಶ್ವಾಸ ತಂದಿದ್ದರು. ನೂತನ ಅಧ್ಯಕ್ಷರು ಭ್ರಷ್ಟಾಚಾರ ರಹಿತವಾಗಿ ಜನಪರ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.