ರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮಲೆನಾಡಿನ ಪ್ರತಿಭೆ
ಉದಯವಾಣಿ ಸುಧೀರ್ ರವರ ವಿಶೇಷ ಲೇಖನ
ಸಕಲೇಶಪುರ: ಅಣ್ಣ ನಡೆಸುತ್ತಿರುವ ಜಿಮ್‌ನಲ್ಲಿ ತರಬೇತಿ ಪಡೆದ ಬಡ ಯುವಕನೋರ್ವ ರಾಷ್ಟ್ರ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗೆಲ್ಲುವ ಮುಖಾಂತರ ರಾಜ್ಯ, ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಪಟ್ಟಣದ ಹಳೆ ಸಂತೆವೇರಿ ಬಡಾವಣೆಯ ನಿವಾಸಿ ಸಾಗರ್ ರಾಷ್ಟ್ರಮಟ್ಟದ ಜೂನಿಯರ್ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿರುವ ಯುವಕನಾಗಿದ್ದಾನೆ. ಪಟ್ಟಣದ ಹಳೆ ಸಂತೆವೇರಿ ಬಡಾವಣೆಯ ನಿವಾಸಿ ವಿಜಯ್ ಕುಮಾರ್ ಹಾಗೂ ವೇದಾವತಿರವರ ಕಿರಿಯ ಪುತ್ರ ಸಾಗರ್ ಬಡತನದ ನಡುವೆಯೆ ತನ್ನ ಪ್ರತಿಭೆಯನ್ನು ತೋರಿಸಿ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಸಾಗರ್ ತಂದೆ ವಿಜಯ್ ಕುಮಾರ್ ಲಾರಿ ಚಾಲಕರಾಗಿದ್ದು ತಾಯಿ ವೇದಾವತಿ ಗೃಹಿಣಿಯಾಗಿದ್ದಾರೆ. ಪಟ್ಟಣದ ಷಾಪ್ ಸಿದ್ದೇಗೌಡ ಶಾಲೆಯಲ್ಲಿ 7 ನೇತರಗತಿವರೆಗೆ ವಿದ್ಯಾಬ್ಯಾಸ ಮಾಡಿ ನಂತರ ಜೂನಿಯರ್ ಹೈಸ್ಕೂಲ್‌ನಲ್ಲಿ ಪ್ರೌಡಶಿಕ್ಷಣ ಮುಗಿಸಿ ಪಿಯುಸಿಯನ್ನು ಹಾಸನದ ಖಾಸಗಿ ಕಾಲೇಜೊಂದರಲ್ಲಿ ಮುಗಿಸಿ ಪ್ರಸ್ತುರ ದೂರ ಶಿಕ್ಷಣ ಮೂಲಕ ಪದವಿ ಪರೀಕ್ಷೆ ಬರೆಯುತ್ತಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಡಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಯಲ್ಲಿ ಪಡೆದಿರುವ ಸಾಗರ್ ಬಡತನದಲ್ಲೆ ಬೆಳೆದು ಇದೀಗ ರಾಷ್ಟ್ರಮಟ್ಟದ ಪ್ರಶಸ್ತಿ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ದೇಹದಾರ್ಡ್ಯ ಪಟುವಾಗಲು ಬಹಳ ಶ್ರಮಿಸಬೇಕಾಗಿದ್ದು ಇದಕ್ಕಾಗಿ ವಿಶೇಷ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಈ ಆಹಾರಗಳನ್ನು ಸೇವಿಸುವುದಲ್ಲದೆ ದೇಹವನ್ನು ಸಹ ದಂಡಿಸಬೇಕಾಗುತ್ತದೆ. ವಿಶೇಷ ಆಹಾರಗಳಿಗಾಗಿ ಬಹಳಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಆದರೂ ಸಹ ಸಾಗರ್ ಬಡತನದ ನಡುವೆ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಸಾಗರ್ ಅಣ್ಣ ಶೋಭಿತ್ ಸಹ ಜಿಮ್ ಪಟುವಾಗಿದ್ದು ಹಾಸನದ ಮಲ್ನಾಡ್ ಕಾಲೇಜ್ ಆ್ ಇಂಜಿನಿಯರಿಂಗ್ ಎದುರು ರಿಬಿಲ್‌ಡ್ ಫಿಟ್‌ನೆಶ್ ಎಂಬ ಜಿಮ್‌ವೊಂದನ್ನು ನಡೆಸುತ್ತಿದ್ದಾರೆ. ಶೋಭಿತ್ ಸಹ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿರುತ್ತಾರೆ. ಅಣ್ಣನ ಮಾರ್ಗದರ್ಶನದಲ್ಲೆ ಕಠಿಣ ತರಬೇತಿ ಪಡೆದ ಸಾಗರ್ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಬೇಕಾಗಿರುವ ರೀತಿಯಲ್ಲಿ ದೇಹವನ್ನು ಸಜ್ಜುಗೊಳಿಸಿಕೊಂಡಿದ್ದಾರೆ. ಮೊದಲಿಗೆ ಹಾಸನ ಯೂನಿವರ್ಸಿಟಿಯಲ್ಲಿ ನಡೆದ 65 ಕೆ.ಜಿ ಒಳಗಿನ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಸಾಗರ್ ಗೆದ್ದಿದ್ದು ಇದಾದ ನಂತರ ಎಬಿಪಿಎ್ ಜಂಬಲ್ ಪುರ್ ಮಧ್ಯಪ್ರದೇಶ್ ಡಿಬಿ ಕ್ಲಾಸಿಕ್ 2025 ನ್ಯಾಷನಲ್ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಮೆನ್ ಫಿಸಿಕ್ ಬೆಳ್ಳಿಯ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಇಷ್ಟೆಲ್ಲಾ ಸಾಧನೆ ಮಾಡಿದರು ಸಹ ಸಾಗರ್‌ಗೆ ಸೂಕ್ತ ಪ್ರಾಯೋಜಕರ ಕೊರತೆ ಕಂಡು ಬರುತ್ತಿದ್ದು ಉತ್ತಮ ಪ್ರಾಯೋಜಕರು ಸಾಗರ್‌ಗೆ ಸಿಕ್ಕಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾಗರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವುದರಲ್ಲಿ ಅನುಮಾನವಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿ ಬಡತನದಲ್ಲೆ ಬೆಳೆದು ಸಾ‘ನೆ ಮಾಡಿರುವ ಸಾಗರ್ ರವರನ್ನು ನಾವೆಲ್ಲರು ವಿಶೇಷವಾಗಿ ಪೊ್ರೀತ್ಸಾಹಿಸಬೇಕಾಗಿದೆ.
ಹೇಳಿಕೆ: ಸಾಗರ್, ಚಿನ್ನದ ಪದಕ ವಿಜೇತ ದೇಹದಾರ್ಡ್ಯ ಪಟು: ಅಣ್ಣ ಶೋಭಿತ್ ಮಾರ್ಗದರ್ಶನದಲ್ಲಿ ಬೆಂಗಳೂರಿನ ವಿಜಯ್‌ರವರ ತರಬೇತಿಯಲ್ಲಿ ನಾನು ಇಂದು ಈ ಸಾಧನೆ ಮಾಡಿದ್ದೇನೆ. ತರಬೇತಿಗೆ ಅತ್ಯಂತ ಹಣ ಖರ್ಚಾಗುವುದರಿಂದ ಪ್ರಾಯೋಜಕರ ನಿರೀಕ್ಷೆಯಲ್ಲಿ ನಾನಿದ್ದೇನೆ.
ಸುಬ್ರಹ್ಮಣ್ಯ, ಮಹೇಶ್ವರಿ ನಗರ ನಿವಾಸಿ: ಸಾಗರ್‌ರವರು ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆಲ್ಲುವ ಮೂಲಕ ನಮ್ಮೂರಿಗೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು.