ವಕೀಲ ದುಷ್ಯಂತ್ ಮೇಲೆ ಮಾರಣಾಂತಿಕ ಹಲ್ಲೆ ಕೇಸ್ : ಐವರ ಬಂಧನ
ಸಕಲೇಶಪುರ/ಆಲೂರು : ಡಿ. 18 ರಂದು ವಕೀಲರ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಲೂರು ತಾಲೂಕು ಪಾಳ್ಯ ಹೋಬಳಿ ರಂಗೇನಹಳ್ಳಿ ಗ್ರಾಮ ವಕೀಲ ದುಷ್ಯಂತ ಕುಮಾರ್ ಮನೆಗೆ ತೆರಳುವ ವೇಳೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪ್ರಕರಣ ಇಡೀ ಜಿಲ್ಲೆ ಬಿಚ್ಚಿ ಬೀಳುವಂತೆ ಮಾಡಿತ್ತು. ಪ್ರಕರಣದ ಬೆನ್ನತ್ತಿದ ಆಲೂರು ಮತ್ತು ಸಕಲೇಶಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತರಲ್ಲಿ ಬಾಳ್ಳುಪೇಟೆ ಜೆಪಿ ನಗರದ ಐಶ್ವರ್ಯ ಹೋಟೆಲ್ ಮಾಲೀಕ ಎ1 ಆರೋಪಿ ಕಿರಣ್, ಎ2 ಜೆಸಿಬಿ ಚಾಲಕ ರವಿ,ಎ3 ದೀಪು ಅಲಿಯಾಸ್ ದೀಪಕ್,ಬಾಳ್ಳುಪೇಟೆ ಶಕ್ತಿ ಶಾಮಿಯಾನ ಅಂಗಡಿ ಮಾಲೀಕ ಎ4 ಶಕ್ತಿ ವೇಲು,ಬಾಳ್ಳುಪೇಟೆ ಬಟ್ಟೆ ಅಂಗಡಿ ಮಾಲೀಕ ಎ5 ಗೋಪಾಲ ಅಲಿಯಾಸ್ ಗೋಪಿ,ಕೆ. ಹೊಸಕೋಟೆ ಬಳಿಯ ಕಿತ್ತಗೆರೆ ಗ್ರಾಮದ ಎ6 ಭರತ್ ಅಲಿಯಾಸ್ ಅಪ್ಪಿ. ಬಂದಿತರಾಗಿದ್ದು ಎ2 ಆರೋಪಿ ರವಿ ತಲೆಮರಿಸಿಕೊಂಡಿದ್ದು ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಎ4 ಆರೋಪಿ ಶಕ್ತಿವೇಲು ವಕೀಲನ ಮೇಲೆ ಹಲ್ಲೆ ನೆಡೆಸಿ ರಾತ್ರೋರಾತ್ರಿ ತಮಿಳುನಾಡಿಗೆ ಪರಾರಿಯಾಗಿದ್ದನ್ನು ನಂತರ ಪೊಲೀಸರು ಹೊರ ರಾಜ್ಯಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಒಟ್ಟು ಐವರನ್ನು ಹಾಸನದ ಸಂತೆಪೇಟೆಯಲ್ಲಿನ ಜೈಲಿಗೆ ಸುಪರ್ದಿಗೆ ವಹಿಸಿದ್ದಾರೆ.ವಕೀಲ ದುಷ್ಯಂತ್ ಮೇಲೆ ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಪೊಲೀಸರ ತನಿಖೆಯಿಂದಷ್ಟೇ ಸತ್ಯ ಹೊರ ಬೀಳಬೇಕಿದೆ. ಪ್ರಕರಣವನ್ನು ಜಿಲ್ಲಾ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ಮಾರ್ಗದರ್ಶನದಲ್ಲಿ ಆಲೂರು ವೃತ್ತ ನಿರೀಕ್ಷಕ ಗಂಗಾಧರ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.