ಕೃಷಿ ಹೊಂಡಕ್ಕೆ ಹಾರಿ ಪತಿ ಪತ್ನಿ ಆತ್ಮಹತ್ಯೆ ಶಂಕೆ : ಪತ್ನಿ ಶವ ಪತ್ತೆ ಪತಿಯ ಶವಕ್ಕಾಗಿ ಹುಡುಕಾಟ
ಆಲೂರು : ಸಾಲ ಬಾದೆ ತಾಳಲಾರದೆ ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪಾಳ್ಯ ಹೋಬಳಿ ಕಟ್ಟೆಗದ್ದೆ ಗ್ರಾಮದಲ್ಲಿ ನೆಡೆದಿದೆ.
ಗ್ರಾಮದ ನಟೇಶ್ (55) ಹಾಗೂ ಚಿನ್ನಮ್ಮ (45) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ.ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಕೆರೆ ( ಕೃಷಿ ಹೊಂಡ ) ಕ್ಕೆ ಕಳೆದ ರಾತ್ರಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪತ್ನಿ ಚಿನ್ನಮ್ಮನ ಶವ ನೀರಿನಲ್ಲಿ ತೆಲುತ್ತಿದ್ದರಿಂದ ಕೆರೆಯಿಂದ ಶವವನ್ನು ಮೇಲೆತ್ತಿದ್ದು ಪತಿ ನಟೇಶ್ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.