ಹೆಗ್ಗದ್ದೆ ಗ್ರಾಪಂ ನೂತನ ಅಧ್ಯಕ್ಷರಾಗಿ ಜೈಪಾಲ್ ಆಯ್ಕೆ.
ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿ ಹೆಗ್ಗದ್ದೆ ಗ್ರಾಮ ಪಂಚಾಯತಿಯ ಅಧ್ಯಕ್ಷರ ಚುನಾವಣೆ ಸೋಮವಾರ ಜರುಗಿತು.
ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನೆಡೆದು ಅಧ್ಯಕ್ಷರ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಜೈಪಾಲ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಶಾಸಕ ಸಿಮೆಂಟ್ ಮಂಜು, ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗೋಡುಮನೆ ಪರಮೇಶ್.ಧರ್ಮರಾಜ್ ಹೆಗ್ಗದ್ದೆ.ಮೇಘರಾಜ್ ದೇಕ್ಲ ಹಾಗೂ ಷಣ್ಮುಖರವರು ಹಾಗೂ ಕಾರ್ಯಕರ್ತರು ಹಾಜರಿದ್ದರು