Saturday, April 19, 2025
Homeಸುದ್ದಿಗಳುಸಕಲೇಶಪುರಮರದಿಂದ ಬಿದ್ದು ಗಾಯಗೊಂಡಿದ್ದ ಯುವಕನನ್ನು ಭೇಟಿ ಮಾಡಿ ಅರೋಗ್ಯ ವಿಚಾರಿಸಿದ ಶಾಸಕ - ಸಿಮೆಂಟ್ ಮಂಜು.

ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕನನ್ನು ಭೇಟಿ ಮಾಡಿ ಅರೋಗ್ಯ ವಿಚಾರಿಸಿದ ಶಾಸಕ – ಸಿಮೆಂಟ್ ಮಂಜು.

ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕನನ್ನು ಭೇಟಿ ಮಾಡಿ ಅರೋಗ್ಯ ವಿಚಾರಿಸಿದ ಶಾಸಕ – ಸಿಮೆಂಟ್ ಮಂಜು.

ಸಕಲೇಶಪುರ : ಕೆಲ ದಿನಗಳ ಹಿಂದೆ ಮರದ ದಿಂಬಿಗಳನ್ನು ಲಾರಿಗೆ ತುಂಬಿಸುವ ವೇಳೆ ಕಾಲು ಮೇಲೆ ಮರದ ದಿಂಬಿಯೊಂದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮನೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಅರೋಗ್ಯ ವಿಚಾರಿಸಿದರು.

ಶನಿವಾರ ತಾಲೂಕಿನ ಯಸಳೂರು ಹೋಬಳಿ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೌಕೋಡಿ ಗ್ರಾಮದ ಪ್ರದೀಪ್   ಗಾಯಗೊಂಡಿರುವ ಯುವಕ. ಈ ವೇಳೆ ಮಾತನಾಡಿದ ಶಾಸಕರು, ಯುವಕನ ಅರೋಗ್ಯದ ವಿಚಾರ ವಾಗಿ ಇದುವರೆಗೂ ವೈದ್ಯಕೀಯ ವೆಚ್ಚವಾಗಿರುವುದಕ್ಕೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯವನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾತ್ಕಾಲಿಕವಾಗಿ ಕುಟುಂಬ ನಿರ್ವಹಣೆಗಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯ ಕಿರಣ್, ಬಿಜೆಪಿ ಮುಖಂಡರಾದ ರವಿ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular