ಸಾಲಬಾಧೆ: ರೈತ ಆತ್ಮಹತ್ಯೆ
ಆಲೂರು :ತಾಲ್ಲೂಕಿನ ಕುಂದೂರು ಹೋಬಳಿ ಮೂಡನಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತನೊಬ್ಬ ಮಂಗಳವಾರ ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಮೂಡನಳ್ಳಿ ಗ್ರಾಮದ ಚಂದ್ರೇಗೌಡ (59) ಆತ್ಮಹತ್ಯೆ ಮಾಡಿಕೊಂಡ ರೈತ.
ಇವರು ಬೆಳೆಸಾಲವಾಗಿ ಕರ್ನಾಟಕ ಬ್ಯಾಂಕಿನಲ್ಲಿ 2.70 ಲಕ್ಷ ಸಾಲ ಪಡೆದಿದ್ದರು. ವರ್ಷದಿಂದ ವರ್ಷಕ್ಕೆ ಸಾಲದ ಬಡ್ಡಿ ಹೆಚ್ಚಾಗುತ್ತಿತ್ತು. ಮತ್ತೊಂದೆಡೆ ತಮ್ಮ ಜಮೀನಿನಲ್ಲಿ ಸಾಲ ಮಾಡಿ ಬೆಳೆದಿದ್ದ ಬೆಳೆಗಳು ಸರಿಯಾದ ದರ ಸಿಗದೆ ಪ್ರತಿ ಬಾರಿಯೂ ನಷ್ಟದ ಸುಳಿಗೆ ಸಿಲುಕಿದ್ದರು. ಪರಿಣಾಮ ಪಡೆದಿದ್ದ ಸಾಲಕ್ಕೆ ಬಡ್ಡಿ ಸೇರಿ ಒಟ್ಟು 5 ಲಕ್ಷವಾಗಿತ್ತು.ಸಾಲಕ್ಕೆ ಹೆದರಿ ಇಂದು ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.