ಸಕಲೇಶಪುರ : ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನೆಡೆಸಿದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ಸಕಲೇಶಪುರ ಹಾಗೂ ಆಲೂರು ತಾಲೂಕಿನ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕ ಸಿಮೆಂಟ್ ಮಂಜು ನೆಡೆಸಿದರು.ನಂತರ ಮಾತನಾಡಿದ ಶಾಸಕರು, ಸಕಲೇಶಪುರ – ಮೂಡಿಗೆರೆ ರಸ್ತೆ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿಯಾದಂತೆ ಸರಿಯಾಗಿ ಅಗತ್ಯವಿರುವ ಕಡೆಗಳಲ್ಲಿ ತೊಳುಗವಲಿ ನೀಡಬೇಕು.ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ರಸ್ತೆ ಬದಿ ಹಾಗೂ ಸೇತುವೆ ಅಸುಪಾಸಿನಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಶೀಘ್ರವಾಗಿ ತೆರವುಗೊಳಿಸುವಂತೆ ಸೂಚನೆ ನೀಡಿದರು. ರಸ್ತೆ ಬದಿಯಲ್ಲಿರುವ ಮರಗಳ ಕೊಂಬೆಗಳು ರಸ್ತೆ ಭಾಗಿ ಬೀಳುವ ಹಂತದಲ್ಲಿದ್ದರೆ ಅಂತ ಮರಗಳನ್ನು ಗುರುತಿಸಿ ಅರಣ್ಯ ಇಲಾಖೆ ಜೊತೆ ಸಮನ್ವಯ ಸಾಧಿಸಿ ತೆರವು ಗೊಳಿಸಲು ಮುಂದಾಗುವಂತೆ ತಿಳಿಸಿದರು.ಕ್ಷೇತ್ರದಲ್ಲಿ ತೀರ ಹದಗೆಟ್ಟಿರುವ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳನ್ನು ಗುರುತಿಸಿ ಪಟ್ಟಿ ನೀಡುವಂತೆ ಅಧಿಕಾರಿಗಳಳಿಗೆ ತಿಳಿಸಿದರು ಕ್ಷೇತ್ರದಲ್ಲಿ ಜನರು ಹಾಗು ವಾಹನ ಸಂಚಾರಕ್ಕೆ ಅಸಮರ್ಪಕವಾಗಿರುವ ರಸ್ತೆಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಅನುದಾನಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಪಿಡಬ್ಲ್ಯೂಡಿ ಸಹಾಯಕ ಕಾರ್ಯ ಪಾಲಕ ಅಭಿಯಂತರ ಮುರುಗೇಶ್, ಕಿರಿಯ ಅಭಿಯಂತರರಾದ ಅರುಣ್ ಕುಮಾರ್, ಮಧು ಕುಮಾರ್ ಸಲ್ಮಾ, ರಜಾಕ್