ವಕ್ಫ್ ಆಸ್ತಿ ವಿವಾದ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಮೆಂಟ್ ಮಂಜು ವಾಗ್ದಾಳಿ
ಬಳ್ಳಾರಿ : ರಾಜ್ಯದ ವಿವಿಧೆಡೆ ರೈತರ ಜಮೀನನ್ನು ವಕ್ಶ್ ಆಸ್ತಿ ಎಂದು ನಮೂದಿಸಿರುವ ಆರೋಪ ಕೇಳಿಬಂದ ನಂತರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ‘ಲ್ಯಾಂಡ್ ಜಿಹಾದಿ’ಯಲ್ಲಿ ತೊಡಗಿದೆ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ಹೇಳಿದರು.
ಸೋಮವಾರ ಬಳ್ಳಾರಿಯಲ್ಲಿ ನೆಡೆದ ಪ್ರತಿಭಟನೆ ನೆಡೆಸಿ ಮಾತನಾಡಿದರು.ಜಮೀರ್ ಅಹ್ಮದ್ ಖಾನ್ ಸಚಿವರಾಗಿ ರಾಜ್ಯಾದ್ಯಂತ ಸಂಚರಿಸಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಮಠಗಳ ಭೂಮಿಯನ್ನು ವಕ್ಫ್ ಭೂಮಿ ಎಂದು ಹೇಳಲಾಗಿದೆ. ಸುಮಾರು 15,000 ಕ್ಕೂ ಹೆಚ್ಚು ರೈತರ ಜಮೀನನ್ನು ವಕ್ಫ್ ಭೂಮಿ ಎಂದು ಹೇಳಲಾಗುತ್ತಿದೆ. ನಿಮಗೆ ದಮ್ಮಿದ್ದರೆ, ಪ್ರಾಮಾಣಿಕರಾಗಿದ್ದರೆ ವಕ್ಫ್ ಜಮೀನು ಒತ್ತುವರಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.ಸಿಎಂ ಸಿದ್ದರಾಮಯ್ಯ ಮೇಲೆ ರೈತರಿಗೆ ನಂಬಿಕೆ ಇಲ್ಲ. ಮುಸ್ಲಿಂರ ಓಲೈಕೆಗಾಗಿ ಕರ್ನಾಟಕವನ್ನು ಸಿದ್ದರಾಮಯ್ಯ ನಾಶ ಮಾಡುತ್ತಿದ್ದಾರೆ. ವಕ್ಫ್ ಬೋರ್ಡ್ ಅದಿಲ್ ಶಾಹಿ, ಘಜ್ನಿ ಮೊಹಮ್ಮದ್, ಬಾಬರ್ ಮಂಡಳಿ ಆಗಿದೆ ಎಂದು ಆರೋಪಿಸಿದರು. ವಿವಾದಕ್ಕೆ ಕಾರಣ ರಾಗಿರುವ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪ್ರತಿಪಕ್ಷ ಅಗ್ರಹಿಸಿದರು.