Wednesday, January 22, 2025

ಶುದ್ಧ  ನೀರು ಪೂರೈಕೆಗೆ ಜಲ ಜೀವನ್ ಮಿಷನ್ – ಶಾಸಕ ಸಿಮೆಂಟ್ ಮಂಜು 

ಸಕಲೇಶಪುರ : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶ ದಿಂದ ಜಲ ಜೀವನ್ ಮಿಷನ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಸಕಲೇಶಪುರ :ತಾಲೂಕಿನ ಯಸಳೂರು ಹೋಬಳಿ ಚಂಗಡಿಹಳ್ಳಿ ಪಂಚಾಯತಿ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ₹78 ಲಕ್ಷ ವೆಚ್ಚದ ಮನೆ–ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿ ಪೂಜೆ  ನೆರವೇರಿಸಿ ಮಾತನಾಡಿದ ಅವರು,ಜೆಜೆಎಂ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ.

ಗ್ರಾಮದಲ್ಲಿರುವ ಸುಮಾರು 80 ಕ್ಕೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು.ಪ್ರತಿ ಮನೆಗೂ ನೀರು ದೊರಕಿಸಿಕೊಡುವ ಉದ್ದೇಶದಿಂದ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಜೊತೆಗೆ ಪೈಪ್ ಲೈನ್ ಕಾಮಗಾರಿ ನೆಡೆಸುವ ವೇಳೆ ಅನವಶ್ಯಕವಾಗಿ, ಅವೈಜಾನಿಕವಾಗಿ ಗುಂಡಿ ತೊಡದೆ ಮೂಲ ರಸ್ತೆಗೆ ಯಾವುದೇ ದಕ್ಕೆಯಾಗದೆ ಹಾಗೆ ಕೆಲಸ ನಿರ್ವಹಿಸಿ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಎಂದು ಸೂಚನೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರಸ್ವಾಮಿ, ಸದಸ್ಯ ಲೋಕೇಶ್ ಗೌಡ, ನೇತ್ರ ಮಂಜುನಾಥ್, ಸವಿನ ಗೌಡ, ನವೀನ್ ಬಸುಗುಳ, ಕಿರಣ್ ನಾರೂರು, ಮಹೇಶ್ ಪಿಡಿಓ ಸುರೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular