ಸಕಲೇಶಪುರ : ನಿವೃತ್ತ ಶಿಕ್ಷಕ ಮುನಿಸ್ವಾಮಿ ನಿಧನ
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆಯ ಬನವಾಸೆಯ ನಿವೃತ್ತ ಶಿಕ್ಷಕ ಬಿ. ಪಿ ಮುನಿಸ್ವಾಮಿ(79) ಹೃದಯಘಾತದಿಂದ ನಿಧನರಾಗಿದ್ದಾರೆ.
ಮಂಗಳವಾರ ರಾತ್ರಿ ದಿಡೀರ್ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 2:30 ರ ಸಮಯದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ
ಮುನಿಸ್ವಾಮಿಯವರು ತಮ್ಮ ಮೊದಲ ಶಿಕ್ಷಕ ವೃತ್ತಿಯಲ್ಲಿ ಬೇಲೂರು ತಾಲೂಕು ರಾಜನಶಿರುರೂ ನಲ್ಲಿ ಆರಂಭಿಸಿ ನಂತರ ಬಾಳ್ಳುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಕಲೇಶಪುರದ ಶಾಪ್ ಸಿದ್ದೇಗೌಡ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ಶಿಕ್ಷಣ ಇಲಾಖೆಯಲ್ಲಿ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಆಗಲಿದ್ದಾರೆ. ಮೊದಲ ಪುತ್ರ ಮನೋಜ್ ಸಕ್ಪಾಲ್ ಸಕಲೇಶಪುರ ತಾಲೂಕಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಎರಡನೇ ಪುತ್ರ ವಿಕ್ರಂ ಸಕ್ಪಾಲ್ ಭೀಮ್ ಆರ್ಮಿ ತಾಲೂಕು ಅಧ್ಯಕ್ಷರಾಗಿದ್ದಾರೆ.ಪುತ್ರಿ ಪ್ರೀತಿಯವರು ರಾಜ್ಯ ಮಟ್ಟದ ವಿವಿಧ ನ್ಯೂಸ್ ಚಾನಲ್ ಗಳಲ್ಲಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದು ಸದ್ಯ ರಿಪಬ್ಲಿಕ್ ಕನ್ನಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೃತ ಮುನಿಸ್ವಾಮಿಯವರು ಅಪಾರ ಬಂಧು ಬಳಗ ಹೊಂದಿದ್ದು ಇಂದು ಸಂಜೆ ಬನವಾಸೆ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನೆಡೆಯಲಿದೆ ಎಂದು ತಿಳಿದು ಬಂದಿದೆ.