ಸಕಲೇಶಪುರ ತಾಲ್ಲೂಕು ಆಶ್ರಯ ಸಮಿತಿಗೆ ಕಾಂಗ್ರೆಸ್ ಮುಖಂಡ ಫಾರೂಕ್ ಸಕಲೇಶಪುರ ನಾಮನಿರ್ದೇಶನ ಮಾಡಿ ಸರ್ಕಾರದ ಆದೇಶ.
ಸಕಲೇಶಪುರ (ಅಕ್ಟೋಬರ್ 9) : ಸಕಲೇಶಪುರ ತಾಲ್ಲೂಕು ಆಶ್ರಯ ಸಮಿತಿಗೆ ತಾಲೂಕು ಕಾಂಗ್ರೆಸ್ ಮುಖಂಡರಾದ ಫಾರೂಕ್ ಸಕಲೇಶಪುರ ಅವರನ್ನು ನಾಮನಿರ್ದೇಶನಗೊಳಿಸಿ ಸರ್ಕಾರ ಆದೇಶ ಮಾಡಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ, ಸಾಮಾಜಿಕ ಜಾಲತಾಣ ನಿರ್ವಹಣಾ ಸಮಿತಿ ಪ್ರಮುಖರಾಗಿ, ಆನಂತರ ಪಕ್ಷ ನೀಡಿದ ಹಲವಾರು ಜವಾಬ್ದಾರಿಗಳನ್ನು ಇವರು ಸಮರ್ಥವಾಗಿ ನಿರ್ವಹಿಸಿ ತಾಲ್ಲೂಕಿನಲ್ಲಿ ಪಕ್ಷ ಕಟ್ಟಲು ಶ್ರಮಿಸಿದ್ದಾರೆ.
ಸರ್ಕಾರ ತಮ್ಮನ್ನು ಆಶ್ರಯ ಸಮಿತಿಗೆ ನಾಮ ನಿರ್ದೇಶನಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಫಾರೂಕ್ ಸಕಲೇಶಪುರ ತನ್ನ ನೇಮಕಾತಿಗೆ ಶ್ರಮಿಸಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಮುರಳಿ ಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೈರಮುಡಿ ಚಂದ್ರು, ಪುರಸಭಾ ಮಾಜಿ ಅಧ್ಯಕ್ಷರು ಮುಫೀಜ್, ಕೆಪಿಸಿಸಿ ಸದಸ್ಯರಾದ ಯಡೇಹಳ್ಳಿ ಮಂಜುನಾಥ್, ಕೊಲ್ಲಹಳ್ಳಿ ಸಲೀಂ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


                                    
