Saturday, November 23, 2024
Homeಸುದ್ದಿಗಳುಸಕಲೇಶಪುರದೇವಾಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ರೂ 8 ಕೋಟಿ ಮೀಸಲು - ಶಾಸಕ...

ದೇವಾಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ರೂ 8 ಕೋಟಿ ಮೀಸಲು – ಶಾಸಕ ಸಿಮೆಂಟ್ ಮಂಜು.

ದೇವಾಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ರೂ 8 ಕೋಟಿ ಮೀಸಲು – ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿ ದೇವಾಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆ ಹಾಗೂ ಇನ್ನಿತರ ಮೂಲ ಸೌಕರ್ಯಗಳ ಅಭಿವೃದ್ಧಿ ರೂ 8 ಕೋಟಿ ಮೀಸಲಿಡಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು

ಗ್ರಾಮ ಸಭೆಯ ಹಿನ್ನೆಲೆ ರಸ್ತೆ ವಿಚಾರವಾಗಿ ಗ್ರಾಮಸ್ಥರು ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು,ದೇವಾಲಕೆರೆ ಕ್ಷೇತ್ರ ಗಡಿ ಹಂಚಿನ ಗ್ರಾಮವಾಗಿದ್ದು ಇಲ್ಲಿನ ಮೂಲಭೂತ ಸೌಕರ್ಯಗಳ  ಕೊರತೆಯ ವಿಚಾರವಾಗಿ ನನ್ನ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ದೇವಾಲದಕೆರೆ ರಸ್ತೆಯಿಂದ ಹೊಡಚಳ್ಳಿ(ಅತ್ತಿಬೈಲು, ಬಾಣಿಬೈಲು )ರಸ್ತೆಯ 3 ಕಿ. ಮೀ ರಸ್ತೆಗಾಗಿ 3 ಕೋಟಿ, ಪ್ರಸಿದ್ಧ ಪ್ರವಾಸಿಗಾರ ತಾಣವಾದ ಬೆಟ್ಟದ ಭೈರವೇಶ್ವರ ರಸ್ತೆಯ 2 ನೇ ಕಿ. ಮೀ ಯಿಂದ 3.5 ಕಿ ಮೀ ವರೆಗಿನ ಬಾಕಿ ಉಳಿದಿರುವ 3.5 ಕಿ. ಮೀಯಿಂದ 6 ಕಿ ಮೀ ವರೆಗಿನ ರಸ್ತೆಗೆ 2.45 ಕೋಟಿ, ದೇವಾಲದಕೆರೆಯಿಂದ ನೇರವಾಗಿ ಬೆಟ್ಟದ ಭೈರವೇಶ್ವರ ದೇವಸ್ಥಾನದ ರಸ್ತೆಯ 9.5 ರಿಂದ 9.7 ಕಿ ಮೀ ವರೆಗಿನ ರಸ್ತೆಗೆ 60 ಲಕ್ಷ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು. ಈಗ ಮಳೆಗಾಲವಾಗಿರುವುದರಿಂದ ರಸ್ತೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಮಳೆಗಾಲ ಮುಗಿದ ಕೂಡಲೇ  ರಸ್ತೆ ಕಾಮಗಾರಿಯ ಕೆಲಸ ಪ್ರಾರಂಭವಾಗಲಿದೆ ಎಂದು  ಸಭೆಗೆ ತಿಳಿಸಿದರು.ನನಗೆ ಬಂದಿರುವ ಅನುದಾನದಲ್ಲಿ ಹೆಚ್ಚಿನ ಪಾಲು ದೇವಾಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ನೀಡಿದ್ದೇನೆ ಜೊತೆಗೆ ಕುಡಿಯುವ ನೀರು, ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡುತ್ತೇನೆ ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ತರಾಟೆ:

ಬೆಟ್ಟದ ಬೈರವೇಶ್ವರ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿದೆ. ಜಿಲ್ಲೆ ಹಾಗೂಹೊರ ಜಿಲ್ಲೆಗಳಿಂದ ಜಯ ನಿತ್ಯ ನೂರಾರು ಪ್ರವಾಸಿಗರು  ಇಲ್ಲಿಗೆ ಆಗಮಿಸುತ್ತಿರುತ್ತಾರೆ ಆದರೆ ಅರಣ್ಯ ಇಲಾಖೆ ಏಕಾಏಕಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಜೆಸಿಬಿಯಿಂದ ಗುಂಡಿ ನಿರ್ಮಾಣ ಮಾಡಿರುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಜನ ಸಾಮಾನ್ಯರು ಏನಾದರು ಕೆಲಸ ಮಾಡಲು ಮುಂದಾದರೆ ಅವರ ಮೇಲೆ ಪ್ರಕರಣ ದಾಖಲು ಮಾಡುತ್ತೀರಾ ಅದೇ ನೀವು ಏನೂ ಬೇಕಾದರು ಮಾಡಬಹುದೇ ಎಂದು ಪ್ರಶ್ನೆ ಮಾಡಿದರು.ಇಂತಹ ಘಟನೆಗಳು ಮರುಕಳಿಸಿದರೆ ನಿಮ್ಮ ಮೇಲೆಯೇ ಪ್ರಕರಣ ದಾಖಲು ಮಾಡುವ ಜೊತೆಗೆ ಸೇವೆಯಿಂದ ಅಮಾನತ್ತಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಮಲ , ಉಪಾಧ್ಯಕ್ಷ ರವೀಂದ್ರಕುಮಾರ್ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಆದಿತ್ಯ,ಪಿಡಿಓ ರಾಮಚಂದ್ರ ಸೇರಿದಂತೆ ಗ್ರಾಮ ಪಂಚಾಯತಿಯ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular