ದಾಖಲೆಯ 108 ಯುನಿಟ್ ರಕ್ತ ಸಂಗ್ರಹಣೆ.
ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ: ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ದಾನಗಳಲ್ಲಿ ರಕ್ತದಾನವು ಅತ್ಯಂತ ಶ್ರೇಷ್ಠವಾಗಿದೆ ಏಕೆಂದರೆ ರಕ್ತಕ್ಕೆ ಪರ್ಯಾಯಾವಾಗಿ ಬೇರೆ ಯಾವುದು ಇಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಗುರುವಾರ ಪಟ್ಟಣದ ಲಯನ್ಸ್ ಭವನದಲ್ಲಿ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಲಯನ್‌ಸ್ ಸಂಸ್ಥೆ ಮತ್ತು ಭಾರತೀಯ ಜನತಾ ಪಾರ್ಟಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಪಕ್ಷ ನಮಗೆ ಸೇವೆ ಮಾಡುವ ನೈತಿಕ ಪಾಠ ಹೇಳಿಕೊಟ್ಟಿದೆ. ಹುಟ್ಟು ಹಬ್ಬಗಳಂತ ಆಚರಣೆಗಳನ್ನು ಸಮಾಜಕ್ಕೆ ಉಪಯುಕ್ತವಾಗುವಂತ ಸೇವಾ ಕಾರ್ಯಕ್ರಮಗಳ ಮೂಲಕ ಆಚರಿಸುವಂತೆ ಪಕ್ಷ ನಮಗೆ ಸೂಚಿಸಿದೆ . ಹಾಗಾಗಿ ಮನುಷ್ಯರ ಜೀವ ಉಳಿಸುವ ರಕ್ತ ಸಂಗ್ರಹಣೆಗಾಗಿ ಸ್ವಯಂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಕ್ತಕ್ಕೆ ಪರ್ಯಾಯಾವಾದ ಅಮೃತ ಮತ್ತೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿರವರು ಜನಸಾಮಾನ್ಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತ ದಾನ ಮಾಡುತ್ತಿರುವ ನಮ್ಮ ಕಾರ್ಯಕರ್ತರ ಸೇವೆ ಪಕ್ಷಕ್ಕೆ ಹೆಮ್ಮ ತರುವ ವಿಷಯವಾಗಿದೆ. ಐವತ್ತಕ್ಕು ಹೆಚ್ಚು ಬಾರಿ ರಕ್ತದಾನ ಮಾಡಿರುವ ರಕ್ತದಾನಿಗಳು ಸಹ ಇಲ್ಲಿ ಮತ್ತೊಮ್ಮೆ ರಕ್ತದಾನ ಮಾಡಲು ಬಂದಿರುವುದು ವಿಷೇಶವಾಗಿದ್ದು, ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆನಂದ ಲಿಯೋ ವ್ಯಾಸ್‌ರವರ ಸೇವೆ ಶ್ಲಾಘನೀಯವಾದದ್ದು ಎಂದು ಪ್ರಶಂಸೆ ವ್ಯೆಕ್ತಪಡಿಸಿದರು.
ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಮಹೇಶ್ ಮಾತನಾಡಿ ರಕ್ತ ಕೊಡುವುದರಿಂದ ನಿಶಕ್ತರಾಗುತ್ತಾರೆ ಎಂಬ ಭಾವನೆ ಕೆಲವರಲ್ಲಿ ಇದೆ. ಇದು ತಪ್ಪು ಅಭಿಪ್ರಾಯವಾಗಿದ್ದು.ರಕ್ತದಾನ ಮಾಡುವುದರಿಂದ ಯಾವುದೇ ದುಷ್ಪರಿಣಾಮವಾಗುವುದಿಲ್ಲ ಎಂದು ಹೇಳಿದರು. ಒಬ್ಬ ಆರೋಗ್ಯವಂತ ಮನುಷ್ಯ ತಾನು ದಾನ ಮಾಡುವ ಪ್ರಮಾಣದ ರಕ್ತ ಮೂರು ತಿಂಗಳ ಒಳಗೆ ಉತ್ಪತ್ತಿಯಾಗುತ್ತದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಆದ್ದರಿಂದ ಇಂತಹ ತಪ್ಪು ಕಲ್ಪನೆಯನ್ನು ತೊಡೆದು ಹಾಕಬೇಕಿದೆ . ರಕ್ತದಾನದ ಜೊತೆಗೆ ಅಂಗಾಂಗಳ ದಾನವನ್ನು ಮಾಡಲು ಸಹ ನೊಂದಣಿ ಮಾಡಿಸಿಕೊಳ್ಳಲು ಪ್ರತಿಯೋರ್ವರು ಮುಂದಾಗಬೇಕೆಂದು ಅಭಿಪ್ರಾಯಿಸಿದರು.
ಲಯನ್ಸ್ ಸಂಸ್ಥೆ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಮಾತನಾಡಿ ದ್ವೇಷ ಅಸೂಯೆಗಳನ್ನು ಬಿಟ್ಟು ಮಾನವೀಯ ಸಂಬಂಧಗಳನ್ನು ಬೆಳಸಬೇಕಿದೆ . ಪ್ರಾಣ ಎಂಬುದು ಅಮೂಲ್ಯವಾದದ್ದು ಇಂತಹ ಜೀವ ಉಳಿಸುವ ಸೇವಾ ಕಾರ್ಯಗಳಾದ ರಕ್ತದಾನ, ನೇತ್ರದಾನಗಳಂತಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಿದೆ ಹೇಳಿದರು.
ರಕ್ತದಾನ ಶಿಬಿರವನ್ನು ತಾಲ್ಲೂಕು ಆಸ್ಪತ್ರೆ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ನೇರವೇರಿಸಿಕೊಟ್ಟರು.
ಈ ಸಂಧರ್ಭದಲ್ಲಿ ನೂರಕ್ಕು ಹೆಚ್ಚು ರಕ್ತದಾನಿಗಳು ರಕ್ತ ದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿ ಗೊಳೆಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಡಾ. ನಾಗಲಕ್ಷ್ಮೀ, ಲಯನ್ಸ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷರಾದ ರಾಬಿ ಸೋಮಯ್ಯ, ಲಯನ್ಸ್ ರಘುಪಾಳ್ಯ, ಲಯನ್ಸ್ ಕಾರ್ಯದರ್ಶಿ ವೆಂಕಟೇಶ್, ಬಿಜೆಪಿ ಹಿರಿಯ ಮುಖಂಡ ಬ್ಯಾಕರವಳ್ಳಿ ಜಯಣ್ಣ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬೊಮ್ಮನಕೆರೆ ಮಧು,ಸೋಮಶೇಖರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್, ತಾಲೂಕು ಅಧ್ಯಕ್ಷೆ ಬಬಿತಾ ವಿಶ್ವನಾಥ್ ಸೇರಿದಂತೆ ಮುಂತಾದವರು ಹಾಜರಿದ್ದರು.