ಅಗ್ರಹಾರ ಗಣಪತಿ ಅದ್ದೂರಿಯಿಂದ ವಿಸರ್ಜನೆ
ಸಕಲೇಶಪುರ: ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಬನ್ನಿ ಮಂಟಪ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಬೃಹತ್ ಗಣೇಶ ಮೂರ್ತಿಯನ್ನು ಸಂಭ್ರಮ ಸಡಗರದಿಂದ ಭಾನುವಾರ ಹೇಮಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಬಡಾವಣೆಯ ಯುವಕರು ಕೇಸರಿ ಟೀಶರ್ಟ್‌ಗಳನ್ನು ಧರಿಸಿ ಗಣಪತಿ ವಿರ್ಸಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಬಡಾವಣೆಯ ಯುವಕರು, ಮಕ್ಕಳು, ಮಹಿಳೆಯರು ವಾದ್ಯವೃಂದಕ್ಕೆ ಕುಣಿದು ಕುಪ್ಪಳಿಸುವ ಮುಖಾಂತರ ಸಂಭ್ರಮಪಟ್ಟರು. ಬಡಾವಣೆಯ ಎಲ್ಲಾರಿಗೂ ಸಿಹಿ ಹಾಗೂ ಪ್ರಸಾದ ಹಂಚಲಾಯಿತು.


                                    
