Saturday, April 12, 2025
Homeಸುದ್ದಿಗಳುಸಕಲೇಶಪುರಹೆತ್ತೂರು ಪದವಿಪೂರ್ವ ಕಾಲೇಜು ಚಾಂಪಿಯನ್

ಹೆತ್ತೂರು ಪದವಿಪೂರ್ವ ಕಾಲೇಜು ಚಾಂಪಿಯನ್

ಹೆತ್ತೂರು ಪದವಿಪೂರ್ವ ಕಾಲೇಜು ಚಾಂಪಿಯನ್

 ಸಕಲೇಶಪುರ: ಸಕಲೇಶಪುರದ ಸುಭಾಷ್ ಮೈದಾನದಲ್ಲಿ ನಡೆದ 2024-25 ನೇ ಸಾಲಿನ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹೆತ್ತೂರಿನ ಸರ್ಕಾರಿ ಪದವಿಪೂರ್ವ ಕಾಲೇಜು(ಕೆಪಿಎಸ್), ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಲ್ಲದೆ, ಕ್ರೀಡಾಕೂಟದ ಚಾಂಪಿಯನ್ ಕಿರೀಟವನ್ನು ತನ್ನದಾಗಿಸಿಕೊಂಡಿತು.

ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಬಿ.ಡಿ. ಮತ್ತು ಉಪನ್ಯಾಸಕ ವರ್ಗ, ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಸಚಿನ್ ಹೆಚ್.ಎಮ. ಮತ್ತು ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. 

ವಿಜೇತರ ಪಟ್ಟಿ

 ಬಾಲಕರ ವಿಭಾಗ : 3000 ಮೀ. ತೃತೀಯ, 400 ಮೀ. ಪ್ರಥಮ, 200 ಮೀ. ಪ್ರಥಮ ಹಾಗೂ ತೃತೀಯ, ಉದ್ದ ಜಿಗಿತ ತೃತೀಯ, ಗುಂಡು ಎಸೆತ ತೃತೀಯ, ಖೋಖೋ ಪ್ರಥಮ, 100 ಮೀ. ಪ್ರಥಮ, 4×400 ರಿಲೇ ದ್ವಿತೀಯ, ಟೆನಿಕಾಟ್ ಸಿಂಗಲ್ ಹಾಗೂ ಡಬಲ್ಸ್ ದ್ವಿತೀಯ, ಕಬ್ಬಡಿ ದ್ವಿತೀಯ. 

 ಬಾಲಕಿಯರ ವಿಭಾಗ : 3000 ಮೀ. ತೃತೀಯ, 400 ಮೀ. ತೃತೀಯ, 4×100 ರಿಲೇ ಪ್ರಥಮ, 4×400ರಿಲೇ ಪ್ರಥಮ, 800ಮೀ. ದ್ವಿತೀಯ, ತಟ್ಟೆ ಎಸೆತ ತೃತೀಯ, ಥ್ರೋಬಾಲ್ ದ್ವಿತೀಯ, ಖೋಖೋ ದ್ವಿತೀಯ, ಉದ್ದ ಜಿಗಿತ ಪ್ರಥಮ ಹಾಗೂ ತೃತೀಯ, ಎತ್ತರ ಜಿಗಿತ ಪ್ರಥಮ ಹಾಗೂ ತೃತೀಯ, ಹ್ಯಾಮರ್ ಥ್ರೋ ಪ್ರಥಮ ಹಾಗು ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ಪ್ರಥಮ,100 ಮೀ. ತೃತೀಯ, ಜಾವಲಿನ್ ದ್ವಿತೀಯ, ಟೆನಿಕಾಯ್ಟ್ ಸಿಂಗಲ್ ಹಾಗೂ ಡಬಲ್ಸ್ ಪ್ರಥಮ.

RELATED ARTICLES
- Advertisment -spot_img

Most Popular