Sunday, November 24, 2024
Homeಸುದ್ದಿಗಳುಸಕಲೇಶಪುರಬೆಳಗೋಡು ಹೋಬಳಿ ವ್ಯಾಪ್ತಿಯ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಮನವಿ.

ಬೆಳಗೋಡು ಹೋಬಳಿ ವ್ಯಾಪ್ತಿಯ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಮನವಿ.

ಬೆಳಗೋಡು ಹೋಬಳಿ ವ್ಯಾಪ್ತಿಯ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಮನವಿ.

ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿರುವ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಭವನ ನಿರ್ಮಾಣಕ್ಕೆ  ಬಾಳ್ಳುಪೇಟೆಯಲ್ಲಿರುವ ನಾಗರಿಕ ಸೌಲಭ್ಯ ಜಾಗದಲ್ಲಿ ಅವಕಾಶ ನೀಡುವಂತೆ ಸಂಘದ ಸದಸ್ಯರು ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದಾರೆ.

ಸೋಮವಾರ ಸಂಫದ ಪದಾಧಿಕಾರಿಗಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೋಮೇಗೌಡ ರವರಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹರ್ಷ,ಹಲವು ವರ್ಷಗಳಿಂದ ಹೋಬಳಿ ಮಟ್ಟದಲ್ಲಿ ವೀರಶೈವ ಕ್ಷೇಮಾಭಿವೃದ್ಧಿ ಸಂಘವನ್ನು ನಡೆಸಿಕೊಂಡುಬರುತ್ತಿದ್ದೇವೆ ಹಾಗೂ ಕೆಲವಾರು ಸಾಮಾಜಿಕ ಸೇವೆಗಳು ಹಾಗೂ ಸಮಾಜಮುಖಿ ಕೆಲಸಗಳನ್ನು ಸಹ ನಡೆಸಿಕೊಂಡು ಬಂದಿದ್ದು ಹಾಗೂ ಈ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ನಮ್ಮ ಸಮುದಾಯವು ಹೊಂದಿರುತ್ತದೆ ಮತ್ತು ಇದುವರೆಗು ಬೆಳಗೋಡು ಹೋಬಳಿಯಾದ್ಯಂತ ಯಾವುದೇ “ವೀರಶೈವ ಭವನ”ವಿರುವುದಿಲ್ಲ ಮತ್ತು ಈ ಸಂಘವು ಇದುವರೆಗೂ ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆದಿರುವುದಿಲ್ಲ ಮತ್ತು ಈ ಸಂಘದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ಹೆಚ್ಚಿದ್ದು ಸಂಘದ ಮುಂದಿನ ಬೆಳವಣಿಗೆಯ ಉದ್ದೇಶದಿಂದ ಜೆ.ಪಿ.ನಗರಕ್ಕೆ ಹೊಂದಿಕೊಡಂತಿರುವ “ಬಸವೇಶ್ವರ ನಗರ” ಎರಡನೇ ಹಂತದ ಸರ್ವೆ ನಂ.38/1ರಲ್ಲಿ ಕಾಯ್ದಿದಿರಿಸಿರುವ “ಸಿಎ” ಜಾಗದಲ್ಲಿ ಸಮುದಾಯ ಭವನದ ನಿರ್ಮಾಣಕ್ಕಾಗಿ ಸಂಘದ ಹೆಸರಿನಲ್ಲಿ ಒಂದು ನಿವೇಶನವನ್ನು ಮಂಜೂರು ಮಾಡಿಕೊಡಬೇಕಾಬೇಕಾಗಿ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದಾರೆ.

ಈ ಸಂಧರ್ಭದಲ್ಲಿ ಮುಖಂಡರಾದ ಷಣ್ಮುಖಯ್ಯ ಪ್ರದೀಪ್ ನಿಡನೂರು,ಮಲ್ಲಿಕಾರ್ಜುನ, ಗಿರೀಶ್ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular