ಎತ್ತಿನಹೊಳೆ ಯೋಜನೆಯ ಹಂತ 01 ರ ಲೋಕಾರ್ಪಣೆ : ಪಂಪಿಂಗ್ ಸ್ಟೇಷನ್ 05 ನ್ನು ಉದ್ಘಾಟಿಸಿದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ಸಮಗ್ರ ಕುಡಿಯುವ ನೀರಿನ ಬೃಹತ್ ಯೋಜನೆಯಾದ ಎತ್ತಿನ ಹೊಳೆ ಯೋಜನೆಯ 05 ಪಂಪಿಂಗ್ ಸ್ಟೇಷನ್ ನ್ನು ಶಾಸಕ ಸಿಮೆಂಟ್ ಮಂಜುನಾಥ್ ಉದ್ಘಾಟಿಸಿದರು.
ಶುಕ್ರವಾರ ತಾಲೂಕಿನ ಕಾಡುಮನೆ ಬಳಿ ನಿರ್ಮಾಣ ಮಾಡಿರುವ ಪಂಪಿಂಗ್ ಸ್ಟೇಷನ್ ಚಾಲನೆ ನೀಡಿದರು.ಕಾಡುಮನೆಯಿಂದ ತಾಲೂಕಿನ ದೊಡ್ಡ ನಾಗರದ ಬಳಿ ನಿರ್ಮಾಣ ಮಾಡಿರುವ ವಿತರಣಾ ತೊಟ್ಟಿಗೆ ನೀರು ಸಂಗ್ರಹಣೆಯಾಗಲಿದೆ.ದೊಡ್ಡ ನಗರದ ಬಳಿ ಇರುವ ವಿತರಣಾ ತೊಟ್ಟಿ ಒಂದರ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಲೋಕಾರ್ಪಣೆಗೊಳಿಸಿದರು.