Tuesday, November 26, 2024
Homeಸುದ್ದಿಗಳುಸಕಲೇಶಪುರಪಾದಚಾರಿ ರಸ್ತೆಯಲ್ಲಿ ಅಡ್ಡಲಾಗಿ ಅಳವಡಿಸಿರುವ ಬೋರ್ಡ್ ತೆಗೆಸಲು ತಾಕತ್ ಇಲ್ಲದ ಅಧಿಕಾರಿಗಳ ವಿರುದ್ಧ ಸಾಗರ್ ಜಾನೇಕೆರೆ...

ಪಾದಚಾರಿ ರಸ್ತೆಯಲ್ಲಿ ಅಡ್ಡಲಾಗಿ ಅಳವಡಿಸಿರುವ ಬೋರ್ಡ್ ತೆಗೆಸಲು ತಾಕತ್ ಇಲ್ಲದ ಅಧಿಕಾರಿಗಳ ವಿರುದ್ಧ ಸಾಗರ್ ಜಾನೇಕೆರೆ ಅಸಮಾಧಾನ.

ಪಾದಚಾರಿ ರಸ್ತೆಯಲ್ಲಿ ಅಡ್ಡಲಾಗಿ ಅಳವಡಿಸಿರುವ ಬೋರ್ಡ್ ತೆಗೆಸಲು ತಾಕತ್ ಇಲ್ಲದ ಅಧಿಕಾರಿಗಳ ವಿರುದ್ಧ ಸಾಗರ್ ಜಾನೇಕೆರೆ ಅಸಮಾಧಾನ.

ಉದ್ಯಮಿ ಎದುರು ಮಂಡಿಯೂರಿದ ಪುರಸಭಾ ಅಧಿಕಾರಿಗಳು.

 ಕಾನೂನಿಗಿಂತ ದೊಡ್ಡವರ ಅ ಉದ್ಯಮಿ.ಹೊಣೆಗಾರಿಕೆ ಮರೆತ ತಾಲೂಕು ಮಟ್ಟದ ಅಧಿಕಾರಿಗಳು.

ಸಕಲೇಶಪುರ: ಸಾರ್ವಜನಿಕರು ತಿರುಗಾಡುವ ಪಾದಚಾರಿ ರಸ್ತೆಯಲ್ಲಿ ಅಳವಡಿಕೆ ಮಾಡಿರುವ ಬೃಹತ್ ನಾಮ ಫಲಕ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಉದ್ಯಮಿಯೊಬ್ಬರು ಸಕಲೇಶಪುರದ ಹೆಬ್ಬಾಗಿಲಿಗೆ ಅದರಲ್ಲೂ ನಡು ರಸ್ತೆಗೆ ಬೋರ್ಡ್ ಒಂದನ್ನು ಅವರ ಉದ್ಯಮದ ಬೋರ್ಡನ್ನು ಯಾವುದೇ ರೀತಿಯ ಇಲಾಖೆಗಳಿಂದ ಅನುಮತಿ ಪಡೆಯದೆ ಅಕ್ರಮವಾಗಿ ಹಾಕಿಕೊಂಡಿರುತ್ತಾರೆ. ಇದು ನಡು ರಸ್ತೆಯಲ್ಲಿ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಪುರಸಭಾ ಮುಖ್ಯ ಅಧಿಕಾರಿಗಳಿಗೆ ತಿಳಿಸಿದರು ಸಹ ತೆರವುಗೊಳಿಸುತ್ತಿಲ್ಲ ಹಾಗೂ ಪುರಸಭಾ ಮುಖ್ಯ ಅಧಿಕಾರಿಗಳು ಈ ಖಾಸಗಿ ವ್ಯಕ್ತಿಯ ಪರವಾಗಿ ನಿಂತಿದ್ದು ಬೋರ್ಡನ್ನು ತೆರವುಗೊಳಿಸಲು ಆಗುವುದಿಲ್ಲ ಅವರು ಅನುಮತಿ ಪಡೆದುಕೊಳ್ಳುತ್ತೇವೆ ಎಂದು ನಮಗೆ ತಿಳಿಸಿದ್ದಾರೆ ಹಾಗಾಗಿ ನಾವು ಅದನ್ನು ತೆರವುಗೊಳಿಸುವುದಿಲ್ಲ ಎಂದು ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ನಮಗೆ ಪುರಸಭಾ ಮುಖ್ಯ ಅಧಿಕಾರಿಗಳ ಮೇಲೆ ಅನುಮಾನ ಉಂಟಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ದಯವಿಟ್ಟು ನ್ಯಾಯ ಸಮ್ಮತವಾಗಿ ಸಾರ್ವಜನಿಕರಿಗೆ ತಿರುಗಾಡಲು ಮತ್ತು ವಾಹನಗಳಿಗೆ ಅಡಚಣೆ ಆಗದ ರೀತಿಯಲ್ಲಿ ನಡು ರಸ್ತೆಯಲ್ಲಿ ಅನಧಿಕೃತವಾಗಿ ಹಾಕಿಕೊಂಡು ಮಾನ್ಯ ತಾಲೂಕಿನ ಎಸಿ ಮೇಡಂ ಅವರು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವುಗಳು ಅಂದರೆ ಮಲೆನಾಡು ರಕ್ಷಣಾ ಸೇನೆ ಮತ್ತು ವಿವಿಧ ಸಂಘಟನೆಗಳು ಈಗಾಗಲೇ ಬೋರ್ಡ್ ಇರುವ ಸ್ಥಳದಲ್ಲಿ ಟೀ ಅಂಗಡಿಯನ್ನು ಇಟ್ಟು ಸಾರ್ವಜನಿಕರಿಗೆ ಒಂದು ರೂಪಾಯಿಗೆ ಒಂದು ಟೀ ಮಾರುವ ಮುಖಾಂತರ ವಿಭಿನ್ನವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -spot_img

Most Popular